Home » ಬಿ.ಬಿ.ಹೆಗ್ಡೆ ಕಾಲೇಜು:ನಡಿಗೆ ಅಭಿಯಾನ ಸಂಪನ್ನ 
 

ಬಿ.ಬಿ.ಹೆಗ್ಡೆ ಕಾಲೇಜು:ನಡಿಗೆ ಅಭಿಯಾನ ಸಂಪನ್ನ 

by Kundapur Xpress
Spread the love

ಕುಂದಾಪುರ : ಸ್ಥಳೀಯ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್, ಕುಂದಾಪುರದ ಸಹಯೋಗದೊಂದಿಗೆ ಶ್ರೀ ಅವಿನಾಶ್ ಕಾಮತ್ ಅವರ ನೇತೃತ್ವದಲ್ಲಿ ಮೂಡಿಬಂದ ‘ನಡಿಗೆ’ ಹಳೆಯ ಪಾದರಕ್ಷೆಗಳನ್ನು ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆಯುವ ಬಡಮಕ್ಕಳಿಗೆ ಪಾದರಕ್ಷೆಯನ್ನು ಉಚಿತವಾಗಿ ತಯಾರಿಸಿ ಒದಗಿಸುವ ಮುಂಬೈ ಗ್ರೀನ್ ಸೋಲ್ ಸಂಸ್ಥೆಗೆ ಕಚ್ಛಾವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ‘ನಡಿಗೆ’ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನ ಕುಂದಾಪುರದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾಲೇಜಿನ ಬೋಧಕ-ಬೊಧಕೇತರರರು, ವಿದ್ಯಾರ್ಥಿಗಳು ಸೇರಿ 3,223 ಹಳೆಯ ಪಾದರಕ್ಷೆಗಳನ್ನು ಸಂಗ್ರಹಿಸಿದರು.

ಸಂಗ್ರಹಿಸಿದ ಪಾದರಕ್ಷೆಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಶ್ರೀ ಪ್ರದೀಪ್ ಕೋಟೇಶ್ವರ, ಕೋಶಾಧಿಕಾರಿ ಸುನೀಲ್ ಖಾರ್ವಿಯವರಿಗೆ ಹಸ್ತಾಂತರಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಮತ್ತು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಮತ್ತು ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು.

ಈ ಸಂದರ್ಭ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್, ಹೆಲ್ಪಿಂಗ್ ಹ್ಯಾಂಡ್‍ನ ಸದಸ್ಯರಾದ ಸುಚೀತ್ ಹೊದ್ರಾಳಿ, ರಂಜನ್, ವಿದ್ಯಾರ್ಥಿಗಳಾದ ಸ್ಕಂದ ಛಾತ್ರ, ಶ್ರೀನಾಭ ಉಪಾಧ್ಯಾಯ, ಪ್ರಥಮ್, ವಿನೇಶ್ ಉಪಸ್ಥಿತರಿದ್ದರು.

   

Related Articles

error: Content is protected !!