ಉಡುಪಿ : ಉಡುಪಿಯ ನಿವಾಸಿಯಾದ ಲಕ್ಷ್ಮೀನಾರಾಯಣ ಆಚಾರ್ಯರವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ನಿಧನ ಹೊಂದಿದರು ಅವರು ಮಸ್ಕತ್ ದೇಶದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದು ಪುರೋಹಿತರಾಗಿ ಜನ ಮೆಚ್ಚುಗೆಯನ್ನು ಪಡೆದಿದ್ದರು
ನಮ್ಮ ನೆಚ್ಚಿನ ಪುರೋಹಿತರಾಗಿದ್ದ ಲಕ್ಷೀನಾರಾಯಣಾಚಾರ್ಯರು ನಮ್ಮ ಎಲ್ಲ ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿಯೂ ವಿಶೇಷ ಸಹಕಾರ ನೀಡಿದ್ದು ಮಾತ್ರವಲ್ಲದೆ ಸದಾ ಉತ್ಸಾಹಶಾಲಿಗಳಾಗಿದ್ದ ಸರಳ ಸಜ್ಜನರೊಬ್ಬರ ಅಗಲುವಿಕೆಯಿಂದ ಸಮಾಜಕ್ಕೆ ಬಹು ದೊಡ್ಡ ನಷ್ಟವಾಗಿದೆ ಮೃತರಾದ ಆಚಾರ್ಯರಿಗೆ ಪುಣ್ಯಲೋಕ ಪ್ರಾಪ್ತಿಯಾಗಿ ಚಿರಶಾಂತಿ ಸಿಗಲಿ ,ಅವರ ಪತ್ನಿ ,ಮಕ್ಕಳು ,ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಾನ್ ಶ್ರೀಕೃಷ್ಣ ಕರುಣಿಸಲಿ ಎಂದು ಪೂಜ್ಯ ಪುತ್ತಿಗೆ ಶ್ರೀಪಾದರು ಪ್ರಾರ್ಥಿಸಿದ್ದಾರೆ