Home » ಕೀಳಿಂಜೆ ಮಹಾವಿಷ್ಣು ಮಹಾಲಿಂಗೇಶ್ವರ ಕ್ಷೇತ್ರ
 

ಕೀಳಿಂಜೆ ಮಹಾವಿಷ್ಣು ಮಹಾಲಿಂಗೇಶ್ವರ ಕ್ಷೇತ್ರ

by Kundapur Xpress
Spread the love

ದೇವರು ಎಂದರೆ ಒಂದು ವಿಶಿಷ್ಟವಾದಂತಹ ಶಕ್ತಿ ಪ್ರಕೃತಿಯನ್ನು ಕೂಡ ಭಗವದ್ಗೀತೆಯಲ್ಲಿ ದೇವರು ಎಂದೇ ಉಲ್ಲೇಖಿಸಲಾಗಿದೆ ದೇವರು ಎಂದೇ ಉಲ್ಲೇಖಿಸಲಾಗಿರುವ ಪ್ರಕೃತಿಯ ಒಂದು ಸುಂದರವಾದ ಮಡಿಲಲ್ಲಿ ಅತ್ಯಂತ ಪುರಾತನವಾದಂತಹ ಮತ್ತು ವಿಶಿಷ್ಟವಾದಂತಹ ಅಧ್ಯಾತ್ಮಿಕ ದೈವಿಕ ಮತ್ತು ಪ್ರಶಾಂತವಾದಂತಹ ಒಂದು ಪುರಾತನ ವಾದಂತಹ ಮಹಾವಿಷ್ಣು ಮತ್ತು ಈಶ್ವರ ದೇವಸ್ಥಾನ ವಿರುವುದು ಪ್ರಕೃತಿಯ ಮಡಿಲಲ್ಲಿ ಕೀಳಿಂಜೆ ಎಂಬ ಪರಿಸರದಲ್ಲಿ ಶಾಂತ ಪರಿಸರ ಮತ್ತು ಅಧ್ಯಾತ್ಮಿಕ ಜ್ಞಾನ ಮತ್ತು ದೈವ ಭಕ್ತಿ ಹುಡುಕಿಕೊಂಡು ಬರುವಂತಹ ಭಕ್ತರಿಗೆ ಕೀಳಿಂಜೆ ಮಹಾ ವಿಷ್ಣು ಮತ್ತು ಮಹಾಲಿಂಗೇಶ್ವರ ಸನ್ನಿಧಿ ಕೈಬೀಸಿ ಕರೆಯುತ್ತದೆ ಪ್ರಕೃತಿಯ ಮಡಿಲಲ್ಲಿ ಅತ್ಯಂತ ಶಾಂತತೆಯಿಂದ ಅತ್ಯುನ್ನತವಾದ ಜಲಮೂಲ ಇರುವ ಕ್ಷೇತ್ರ ಈ ಕೀಳಿಂಜೆ ಮಹಾವಿಷ್ಣು ಮಹಾಲಿಂಗೇಶ್ವರ ಕ್ಷೇತ್ರ ನೆಮ್ಮದಿಯನ್ನು ಬಯಸಿ ದೇವರನ್ನು ಶಾಂತಚಿತ್ತದಿಂದ ಆರಾಧಿಸಬೇಕಾದರೆ ಬರಬೇಕಾಗಿರುವಂತಹ ಕ್ಷೇತ್ರ ಕೀಳಿಂಜೆ

ಮಹಾವಿಷ್ಣು ಮಹಾಲಿಂಗೇಶ್ವರ ಕ್ಷೇತ್ರ ಮಣಿಪಾಲ ಮತ್ತು ಕೊಳಲಗಿರಿ ಇವುಗಳ ಮಧ್ಯದಲ್ಲಿರುವ ಕ್ಷೇತ್ರ ಕೀಳಿಂಜೆ ಮಹಾವಿಷ್ಣು ವಿನ ಸನ್ನಿಧಿ ಕೀಳಿಂಜೆ ಮಹಾವಿಷ್ಣು ಮತ್ತು ಮಹಾಲಿಂಗೇಶ್ವರ ದೇವಸ್ಥಾನ ಸುಮಾರು ಎಂಟನೇ ಶತಮಾನದ ಕಾಲದ ದೇವಸ್ಥಾನ ಎಂದು
ಇಲ್ಲಿಯ ಅರ್ಚಕರಾದ ರವೀಂದ್ರ ಭಟ್ ಅವರ ಅನಿಸಿಕೆ ಉಡುಪಿಯಿಂದ ಸರಿ ಸುಮಾರು 15 km ದೂರದಲ್ಲಿದೆ ಈ ಕೀಳಿಂಜೆ ಮಹಾ ವಿಷ್ಣುವಿನ ಕ್ಷೇತ್ರ ಮಹಾವಿಷ್ಣು ಸರ್ಪದ ಹೆಡೆಯ ಮೇಲೆ ವಿಶಿಷ್ಟವಾದಂತಹ ಭಂಗಿಯಲ್ಲಿ ಕುಳಿತಿರುವಂತಹ ವಿಗ್ರಹದ ರೂಪ ನಿಜಕ್ಕೂ ನಯನಮನೋಹರ ಇಲ್ಲಿಯ ಅರ್ಚಕರ ಪ್ರಕಾರ ಇಲ್ಲಿಯ ವಿಷ್ಣುವಿನ ವಿಗ್ರಹವನ್ನು ಅನಂತಶಯನ ಎಂದು ಕರೆಯಲಾಗುತ್ತದೆ
ವಿಷ್ಣುವಿನ ದೇವಸ್ಥಾನದ ಪಕ್ಕದಲ್ಲಿ ಒಂದು ಸುಂದರವಾದ ಪುಷ್ಕರಣೆ ಇದೆ ಈ ಪುಷ್ಕರಣಿಗೆ ಕಾವೇರಿ ನದಿಯಿಂದ ನೀರು ಬರುವುದು ಎಂದು ಅರ್ಚಕರು ಹೇಳುತ್ತಾರೆ ವಿಷ್ಣು ದೇವಸ್ಥಾನದ ಇನ್ನೊಂದು ಬದಿಯಲ್ಲಿ ಗಾಲವ ಮುನಿಗಳು ತಪಸ್ಸು ಮಾಡಿದಂತಹ ಕ್ಷೇತ್ರ ಇದೆ ಈ ಕ್ಷೇತ್ರದಲ್ಲಿ ಒಂದು ಚಿಕ್ಕ ಕೊಳ ಇದೆ ಈ ಕೊಳದಿಂದ ನಿರಂತರವಾಗಿ ನೀರು ಹರಿದು ಪುಷ್ಕರಣಿಯನ್ನು ಸೇರುತ್ತದೆ

ಈ ಪುಷ್ಕರಣಿಯಲ್ಲಿ ಕಾರ್ತಿಕ ಮಾಸದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತವಂತೆ ವಿಷ್ಣುವಿನ ದೇವಸ್ಥಾನದ ಮೇಲೆ ಮಹಾಲಿಂಗೇಶ್ವರ ದೇವರ ಸನ್ನಿಧಿ ಇದೆ ಗಾಲವ ಮಹರ್ಷಿಗಳು ಈಗಲೂ ಈ ದೇವಸ್ಥಾನದ ಪರಿಸರದಲ್ಲಿ ತಪಸ್ಸು ಮಾಡುತ್ತಾ ಇರುವರು ಎಂದು ಅರ್ಚಕರು ಹೇಳುತ್ತಾರೆ ಗಾಲವ ಮಹರ್ಷಿಗಳು ವಿಶ್ವಾಮಿತ್ರ ಋಷಿಗಳ ಶಿಷ್ಯರು ಒಮ್ಮೆ ವಿಶ್ವಾಮಿತ್ರ ಮಹರ್ಷಿಗಳಿಗೆ ಗಾಲವ ಮಹರ್ಷಿಗಳು ಗುರುದಕ್ಷಿಣೆ ಏನು ಬೇಕೆಂದು ಕೇಳಿದಾಗ ಕಪ್ಪು ಕಿವಿ ಇರುವ ಬಿಳಿ 800 ಕುದುರೆಗಳು ಬೇಕೆಂದು ವಿಶ್ವಾಮಿತ್ರರು ಕೇಳಿದರು  ಇದೇ ಸಮಯದಲ್ಲಿ ಗಾಲವ ಮಹರ್ಷಿಗಳು ಮಹಾವಿಷ್ಣುವಿನ ಕುರಿತು ತಪಸ್ಸು ಮಾಡಿದರೆಂಬುದು ಇತಿಹಾಸದಲ್ಲಿ ಪ್ರತಿತಿಯಿದೆ ಆ ಮಹಾ ವಿಷ್ಣುವಿನ ಕುರಿತು ತಪಸ್ಸು ಮಾಡಿದಂತಹ ಕ್ಷೇತ್ರ ಕೀಳಿಂಜೆ ಮಹಾವಿಷ್ಣುವಿನ ಕ್ಷೇತ್ರ ಇರಬಹುದು ಎಂದು ಕೆಲವರು ಹೇಳುತ್ತಾರೆ ಏನೇ ಇರಲಿ ಪ್ರಶಾಂತವಾದಂತಹ ಮನಕ್ಕೆ ಅತ್ಯದ್ಭುತ ನೆಮ್ಮದಿ ಕೊಡುವಂತಹ ಒಂದು ಸುಂದರ ರಮಣೀಯ ಪ್ರಕೃತಿಯ ಮಡಿಲಲ್ಲಿರುವ ತಾಣ ಕೀಳಿಂಜೆ ಮಹಾವಿಷ್ಣು ಮಹಾಲಿಂಗೇಶ್ವರ ಸನ್ನಿಧಿ
ಮುಂದಿನ ದಿನಗಳಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ನಡೆಸಲು ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ
ಕೆಲವು ತಿಂಗಳುಗಳ ಹಿಂದೆ ಅಷ್ಟೇ ಈ ಕ್ಷೇತ್ರದಲ್ಲಿ ಕ್ಷೇತ್ರದ ಬಗ್ಗೆ ಅಷ್ಟಮಂಗಳ ಪ್ರಶ್ನೆ ನಡೆದಿತ್ತು

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!