ಭೋರ್ಗರೆವ ಅರಬೀ ಸಮುದ್ರ ಒಂದೆಡೆಯಾದರೆ ಮತ್ತೊಂದೆಡೆ ಹಸಿರು ವನರಾಜಿಗಳಿಂದ ನಿತ್ಯೋತ್ಸವ ನಡೆಸುವ ಕೊಡಚಾದ್ರಿಯ ಸೆರಗು ನೆಲದ ಕಾವನ್ನು ತಣಿಸಲು ಸಹ್ಯಾದ್ರಿಯ ಒಡಲಿನಿಂದ ಧುಮ್ಮಿಕ್ಕಿ ಬಂದು ಸಮುದ್ರ ರಾಜನನ್ನು ತಬ್ಬಿಕೊಳ್ಳಲು ತವಕಿಸುವ ಹತ್ತಾರು ನದಿಗಳ ಲಕ ಲಕ ಲಾಸ್ಯ ಅತ್ತ ಪ್ರಶಾಂತವಾಗಿ ಹರಿಯುವ ಸೌಪರ್ಣಿಕ ನದಿ ಇತ್ತ ಧುಮ್ಮಿಕ್ಕಿ ಹರಿಯುವ ಸಮುದ್ರ ಇವೆರಡನ್ನು ಸೀಳಿಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿ – 66 ಅದುವೇ ಮರವಂತೆ
ನಮ್ಮೂರ ಅಧಿದೇವತೆ ಶ್ರೀ ಕುಂದೇಶ್ವರ
ಪೋರ್ಚುಗೀಸರು ಕುಂದಾಪುರಕ್ಕೆ ಕಾಲಿಡುವ ಮೊದಲು ಕುಂದಾಪುರ ಎಂಬ ಪ್ರದೇಶವು ಕುಂದವರ್ಮನೆಂಬ ತುಂಡರಸನ ಅಧಿಪತ್ಯಕ್ಕೆ ಸೇರಿತ್ತು ಆತ ತುಂಬಾ ಶಿವಭಕ್ತನಾಗಿದ್ದ ಕುಂದೇಶ್ವರ ಅವನ ಮನೆ ದೇವರು ಇಂದಿನ ಕುಂದೇಶ್ವರ ಆತನ ಸೃಷ್ಟಿ ಎಂದು ಇತಿಹಾಸ ಹೇಳುತ್ತಿದೆ
ಕುಂದವರ್ಮನಿಂದಲೇ ಈ ಊರಿಗೆ ಕುಂದಾಪುರ ಎಂಬ ಹೆಸರು ಬಂತು ಅಂದು ಶಿಥಿಲಾವಸ್ಥೆಯಲ್ಲಿದ್ದ ಈ ದೇವಸ್ಥಾನ ಇಂದು ಹಂತ ಹಂತವಾಗಿ ಜೀರ್ಣೋದ್ಧಾರಗೊಂಡು ಪ್ರಸ್ತುತ ದೇವಾಲಯವು ಅಪೂರ್ವ ಅಭಿವೃದ್ಧಿಯನ್ನು ಕಂಡಿದ್ದು ಕುಂದಾಪುರದ ಮುಕುಟ ಕೀರೀಟಕ್ಕೊಂದು ಹೊನ್ನ ಕಳಶವಾಗಿದೆ
ಈಗಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎಸ್ ಕೃಷ್ಣಾನಂದ ಚಾತ್ರ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ ಶೆಟ್ಟಿ, ವಿಶ್ವನಾಥ ಪೂಜಾರಿ, ನಾಗರಾಜ ರಾಯಪ್ಪನಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಹೆಚ್, ಸವಿತಾ ಜಗದೀಶ ಹಾಗೂ ಊರ-ಪರವೂರ ಭಕ್ತರ ನೇತೃತ್ವದಲ್ಲಿ ದೇವಸ್ಥಾನವು ಆಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಶ್ರೀ ಕುಂದೇಶ್ವರನು ತನ್ನ ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ ಸರ್ವರಿಗೂ ಶ್ರೀ ಕುಂದೇಶ್ವರ ಲಕ್ಷದೀಪೋತ್ಸವದ ಹಾರ್ದಿಕ ಶುಭಾಶಯಗಳು
ಕೆ ಗಣೇಶ್ ಹೆಗ್ಡೆ ಕುಂದಾಪುರ