ಕುಂದಾಪುರ : ಕೋಟ ಪೊಲೀಸ್ ಠಾಣೆಯ ಪಿ ಎಸ್ ಐ ಶಂಭು ಲಿಂಗಯ್ಯ ಎಂಬವರನ್ನು ಲಂಚ ಪ್ರಕರಣದ ಆರೋಪದ ಮೇಲೆ ಅಮಾನತುಗೊಳಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕೆ ಅರುಣ್ ಆದೇಶ ಹೊರಡಿಸಿದ್ದಾರೆ ಶಂಭಲಿಂಗಯ್ಯ ಪ್ರಸ್ತುತ ಓಓಡಿ ಮೇಲೆ ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
ಕಾಲೇಜು ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತ ರೊಬ್ಬರು ವೀಡಿಯೊ ಮೂಲಕ ಎಸ್ಪಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಉಡುಪಿ ಎಸ್ಪಿ ಶಂಭುಲಿಂಗಯ್ಯರವರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ