ಗಣಪತಿ ಪ್ರಥಮ ಪೂಜಿತ ದೇವ, ದೇವ ಗಣಗಳ ಅಧಿಪತಿ, ಪ್ರತಿ ಶುಭ ಕಾರ್ಯದ ಪ್ರಥಮ ಪೂಜೆ ಇತನಿಗೆ ಸಲ್ಲುತ್ತದೆ ಇನ್ನೂ ಕುಂಭಾಸಿಯ ಪರಿಸರದಲ್ಲಿ ಅನೇಕ ದೇವಸ್ಥಾನಗಳಿವೆ ವ್ಯಾಸರಾಯರ ದೇವಸ್ಥಾನ ಸೂರ್ಯನಾರಾಯಣ ದೇವಸ್ಥಾನ ಅಯ್ಯಪ್ಪ ದೇವಸ್ಥಾನ ಚಂಡಿಕಾ ಪರಮೇಶ್ವರಿ ದೇವಸ್ಥಾನ ಹೀಗೆ ಕುಂಭಾಶಿ ಎಂಬ ಸ್ಥಳವು ಅನೇಕ ದೇವಾಲಯಗಳಿಗೆ ಭಕ್ತರನ್ನು ಸೆಳೆಯುವ ಕೇಂದ್ರವಾಗಿದೆ
ಕುಂಭಾಸಿಯ ಶ್ರೀ ದೇವರ ಸನ್ನಿಧಿಯಲ್ಲಿ ಗಣಹೋಮ ತುಲಾಭಾರ ರಂಗ ಪೂಜೆ ಮೂಡು ಗಣಪತಿ ಸೇವೆಗಳು ವಿಶೇಷವಾಗಿದೆ ದೇವಸ್ಥಾನದ ಗರ್ಭಗುಡಿ ಸುತ್ತಲು ಗಣಪತಿಯ ಸ್ಥಳ ಪುರಾಣದ ಚಿತ್ರಗಳನ್ನು ಕೆತ್ತಲಾಗಿದೆ ಈ ಕೆತ್ತನೆಯೂ ಬಹಳ ನಯನ ಮನೋಹರವಾಗಿದೆ ವಿನಾಯಕನ ವಿಗ್ರಹವು ದೇವಾಲಯದ ಗರ್ಭಗುಡಿಯಲ್ಲಿ ನಿಂತಿರುವ ಭಂಗಿಯಲ್ಲಿದೆ ವಿಗ್ರಹವು ನಾಲ್ಕು ಕೈಗಳನ್ನು ಹೊಂದಿದೆ ಎರಡು ಮೇಲಿನ ಕೈಗಳನ್ನು “ವರದ ಹಸ್ತ” ಎಂದು ಕರೆಯಲಾಗುತ್ತದೆ
ಕರಾವಳಿ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದ ಗಣಪತಿ ದೇವಸ್ಥಾನಗಳಿವೆ ಅಂತಹ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಅತ್ಯಂತ ಪ್ರಾಚೀನ ಹಾಗೂ ಪುರಾತನವಾಗಿದೆ ಈ ಕ್ಷೇತ್ರಕ್ಕೆ ಆನೆಗುಡ್ಡೆ ಕುಂಭಾಶಿ ಹರಿಹರ ಕ್ಷೇತ್ರ ಮಧುಕಾನನ ಗೌತಮ ಕ್ಷೇತ್ರ ನಾಗಚಲ ಮುಂತಾದ ಹೆಸರುಗಳಿವೆ
ಈ ಗಣಪತಿ ದೇವಸ್ಥಾನದ ಸ್ಥಳ ಪುರಾಣ ಬಹಳ ಸೊಗಸಾಗಿದೆ ಹಿಂದೆ ಮಹಾತೇಜಸ್ವಿಯಾದ ಕುಂಭಾಸುರನೆಂಬ ರಾಕ್ಷಸನು ಈಶ್ವರನನ್ನು ಮೆಚ್ಚಿಸಿ ವರಪಡೆದು ಮದೋನ್ಮತ್ತನಾಗಿ ಶ್ರೀ ಕ್ಷೇತ್ರಕ್ಕೆ ಬಂದು ಸಿಕ್ಕಿದ ಜನರನ್ನೆಲ್ಲ ದಂಡಿಸಿ ಸೇನಾಸಮೇತನಾಗಿ ರಾಜ್ಯ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸತೊಡಗಿದನು. ಈತನಿಗೆ ಭಯಪಟ್ಟು ಅಲ್ಲಿನ ಜನರು ಓಡಿಗೋಗಬೇಕಾಗಿ ಬಂತು ಆ ಸಮಯ ಪಾಂಡವರು ದ್ರೌಪದಿ ಸಹಿತ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರಾ ತೀರದಲ್ಲಿರುವುದನ್ನು ತಿಳಿದ ಗೌತಮಾದಿ ಮುನಿಗಳು ಅಲ್ಲಿಗೆ ಹೋಗಿ ತಮ್ಮ ಸಂಕಷ್ಟವನ್ನು ಪಾಂಡವರಲ್ಲಿ ತೊಡಿಕೊಂಡರು
ಪ್ರದೀಪ್ ಚಿನ್ಮಯಿ ಅಸ್ಪತ್ರೆ ಕುಂದಾಪುರ