ಉಡುಪಿ : ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಸ್ವಾಗತ ಸಮಿತಿಯು ಉಡುಪಿ ಜಿಲ್ಲೆಯ ರಾಮ ಕ್ಷತ್ರೀಯ ಸಮಾಜದೊಂದಿಗೆ ಸಮಾಲೋಚನಾ ಸಭೆ ನಡೆಸಿತು. ಪ್ರಾಸ್ತಾವಿಕವಾಗಿ ಮಾತಾಡಿದ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ರಾಮ ಕ್ಷತ್ರೀಯ ಇಡೀ ಸಮಾಜ ಪುತ್ತಿಗೆ ಪರ್ಯಾಯದ ಪ್ರತಿ ಉಪಸಮಿತಿಯಲ್ಲಿ ಸಹಕರಿಸಬೇಕಾಗಿ ವಿನಂತಿಸಿ, ಸಮಾಜದ ಅಧಿಕೃತ ಸದಸ್ಯತ್ವವನ್ನು ಪತ್ರ ಮುಖೇನ ನೀಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್ .ಎಸ್ ಬಲ್ಲಾಳ್, ಕಾರ್ಯಾಧ್ಯಕ್ಷರಾದ ಶ್ರೀ ರಘುಪತಿ ಭಟ್, ಮಹಾ ಪೋಷಕರಾದ ಶ್ರೀ ಯಶ್ಪಾಲ್ ಸುವರ್ಣ , ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಸಂಚಾಲಕರಾದ ಶ್ರೀ ಮಟ್ಟಾ ರ್ ರತ್ನಾಕರ್ ಶೆಟ್ಟಿ, ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಶ್ರೀ ದಿವಾಕರ್ ಶೆಟ್ಟಿ, ಶ್ರಿ ಸಂತೋಷ್ ಶೆಟ್ಟಿ ತೆಂಕರಗುತ್ತು ಉಪಸ್ಥಿತರಿದ್ದರು. ಪತ್ರ ಸ್ವೀಕರಿಸಿದ ಸಮಾಜದ ಶ್ರೀ ರವಿ ರಾವ್,
Dr ಶಿವಾನಂದ್ ನಾಯಕ್, ಶ್ರೀ ಜಯಕರ ಕೆ. ಶ್ರೀ ಕೆ. ಟಿ . ನಾಯಕ್ ಶ್ರೀ ಪ್ರವೀಣ್ ಕುಮಾರ್ ಗುರ್ಮೆ ಶ್ರೀ ಬಾಲಗಂಗಾಧರ, ರವರು ತಮ್ಮ ಸಮಾಜವು ಎಲ್ಲಾ ವಿಭಾಗ ಗಳಲ್ಲೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಅವರ ಸಮಾಜದ ಪ್ರತಿನಿಧಿಯಾಗಿ ಶ್ರೀ ಕಿಶೋರ್ ಕುಮಾರ್ ಗುರ್ಮೆಯವರನ್ನು ನೇಮಿಸಲಾಯಿತು. ಸುಮಾರು 100ಕ್ಕು ಅಧಿಕ ಸಂಖ್ಯೆ ಯಲ್ಲಿ ರಾಮ ಕ್ಷತ್ರೀಯ ಸಮಾಜದ ಮಹಿಳೆಯರೂ ಸೇರಿ ವಿವಿಧ ಗಣ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು. ಸಮಿತಿಯ ಸಂಚಾಲಕರಾದ ಶ್ರೀ ರಮೇಶ್ ಭಟ್ ಕೆ ಸ್ವಾಗತಿಸಿ ಧನ್ಯವಾದ ನೀಡಿದರು