ಅರ್ಕುಳ : ಮೇರಮಜಲಿನ ಪಕ್ಕಳಪಾದೆ ಸರಸ್ವತಿ ನಗರದ ಶ್ರೀ ಸರಸ್ವತಿ ಭಜನಾ ಮಂದಿರದಲ್ಲಿ ಸಮಾಜ ಸೇವಕ, ಪತ್ರಕರ್ತ ದಿವಂಗತ ನಾಗೇಶ್ ಪಡು ಅವರ ಹೆಸರಿನಲ್ಲಿ ನೂತನ ರಂಗಮಂಟಪದ ಉದ್ಘಾಟನಾ ಸಮಾರಂಭ ನಡೆಯಿತು. ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನೆರವೇರಿದವು.
ಸಂಜೆ ನೂತನ ರಂಗ ಮಂಟಪದಲ್ಲಿ ಪತ್ರಕರ್ತರ ಸಭಾಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ವಹಿಸಿ ಪತ್ರಕರ್ತರ ಜವಾಬ್ದಾರಿ ಸಾಮಾಜಿಕ ಪರಿವರ್ತನೆಯಲ್ಲಿ ಬಹಳ ಮಹತ್ವದ್ದು. ಅಗಲಿ ಹೋದ ಪತ್ರಕರ್ತನನ್ನು ಊರಿನ ಜನತೆ ರಂಗಮಂಟಪವನ್ನು ಕಟ್ಟಿ ನೆನಪಿಸಿಕೊಳ್ಳುವುದು ಪತ್ರಿಕಾ ರಂಗದಲ್ಲೇ ವಿನೂತನ ಇತಿಹಾಸ. ಇದು ಪತ್ರಿಕಾರಂಗಕ್ಕೆ ಸಾಮಾಜಿಕ ಬದ್ಧತೆಯನ್ನು ಕಲಿಸಿಕೊಟ್ಟಿದೆ. ಪತ್ರಕರ್ತನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಹರೀಶ್ ರೈ, ಪ್ರೆಸ್ ಕ್ಲಬ್ ಕೋಶಾಧಿಕಾರಿ ಪ್ರಸಾದ್ ರೈ, ಪತ್ರಕರ್ತರಾದ ವಿಲ್ಫ್ರೆಂಡ್ ಡಿಸೋಜ, ವಿನಯ ಬೋಳಿಯಾರ್, ಹರೀಶ್ ಇರಾ ಉಪಸ್ಥಿತರಿದ್ದರು