ಉಡುಪಿ : ವಾರದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ಮಲ್ಪೆ ಬಂದರಿನಿಂದ ತೆರಳಿದ ಬೋಟ್ ಮುಳುಗಿದ್ದು 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ ಡಿ.12 ರಂದು ಉಡುಪಿ ಕಡೆಕಾರಿನ ರಕ್ಷಾ ಎಂಬವರಿಗೆ ಸೇರಿದ ಶ್ರೀ ನಾರಾಯಣ-2 ಬೋಟ್ ಮಂಗಳವಾರ ಬೆಳಗ್ಗೆ ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ತಗುಲಿ ಬೋಟ್ನ ತಳ ಒಡೆದು ನೀರು ನುಗ್ಗ ತೊಡಗಿತು.
ಬೋಟ್ನ ತಾಂಡೇಲ ವಯರ್ಲೆಸ್ ಸಂದೇಶವನ್ನು ಬೇರೆ ಬೋಟ್ಗಳಿಗೆ ನೀಡಿದರು. ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್ ನವರು ಧಾವಿಸಿ ಬಂದು ಮುಳುಗು ತ್ತಿರುವ ಬೋಟ್ ಮೇಲೆಳೆಯಲು ಪ್ರಯತ್ನಿಸಿದರು. ನೀರಿನ ಅಬ್ಬರ ಹೆಚ್ಚಿದ್ದರಿಂದ ಪ್ರಯತ್ನ ಸಫಲವಾಗಲಿಲ್ಲ. ರಾತ್ರಿ ವೇಳೆ ಬೋಟ್ ಮುಳುಗಡೆಯಾಗಿದ್ದು, ಮೀನುಗಾರರನ್ನು ಸುರಕ್ಷಿತವಾಗಿ ಮಲ್ಪೆ ಬಂದರಿಗೆ ಕರೆತರಲಾಗಿದೆ. ಬೋಟ್ ಮುಳುಗಡೆಯಿಂದ 18 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ ಎಂದು ತಿಳಿದುಬಂದಿದೆ