Home » ರಾಮಮಂದಿರ – ರಾಷ್ಟ್ರಮಂದಿರ
 

ರಾಮಮಂದಿರ – ರಾಷ್ಟ್ರಮಂದಿರ

by Kundapur Xpress
Spread the love

ಅನಾದಿಕಾಲದಿಂದಲೂ ಅಯೋಧ್ಯೆ ತನ್ನದೇ ಆದಂತಹ ವೈಶಿಷ್ಟ್ಯವನ್ನು  ಹೊಂದಿದಂತಹ ಒಂದು ಸುಂದರ ನಗರ  ರಾಮ ನಡೆದಾಡಿದ ಪುಣ್ಯಭೂಮಿ ಅಯೋಧ್ಯೆ  ವಿಷ್ಣು ಮಾನವ ಅವತಾರ  ಪಡೆದು ಅನೇಕರನ್ನ ಉದ್ದರಿಸಿದ ಸ್ಥಳ ಅಯೋಧ್ಯೆ  ಶ್ರೀ ರಾಮ ನಾಮ  ಎಂದ ಕೂಡಲೇ ಅನೇಕರ ಹೃದಯದಲ್ಲಿ  ಭಕ್ತಿಯ ಭಾವ ಜಾಗೃತವಾಗಿ ಬಿಡುತ್ತದೆ  ಶ್ರೀ ರಾಮನ ಅತ್ಯಂತ ಪ್ರಿಯ ಬಂಟ ಹನುಮಂತ  ತನ್ನ ಜೀವನದ ಉದ್ದಕ್ಕೂ  ಶ್ರೀ ರಾಮ ನಾಮ  ಜಪಿಸಿಕೊಂಡೆ   ಇನ್ನೂ ಚಿರಂಜೀವಿಯಾಗಿ   ಇರುವನಂತೆ  ಭಜರಂಗಿ  ಶ್ರೀ ರಾಮ ವಿಷ್ಣುವಿನ ಏಳನೆಯ ಅವತಾರ  ಜಯ ವಿಜಯರನ್ನು ಉದ್ದರಿಸಲು ರಾಮನ ಅವತಾರವಾಗಿ ಭೂಮಿಗೆ ಬಂದು  ರಾವಣ ಕುಂಭಕರ್ಣರನ್ನು ವಧಿಸಿ ಜಯ ವಿಜಯರನ್ನು    ಶ್ರೀ ರಾಮನು ಉದ್ದರಿಸಿದ ಎಂದು ರಾಮಾಯಣದಲ್ಲಿ ಹೇಳಲಾಗಿದೆ  ಅಯೋಧ್ಯೆ ಎಂದರೆ ಶ್ರೀರಾಮನ ಜನ್ಮಭೂಮಿ ಎಂದೇ ಹೇಳಲಾಗುತ್ತದೆ ಅಯೋಧ್ಯೆಯು ಉತ್ತರ ಪ್ರದೇಶದ  ಪೈಜಾಬಾದ್ ನಲ್ಲಿದೆ  ಕ್ರಿಸ್ತ ಪೂರ್ವ 1950ರಲ್ಲಿ ಶ್ರೀ ರಾಮನ ಜನನವಾಗಿತ್ತು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ  ಶ್ರೀರಾಮ ರಾಜ್ಯಭಾರ ನಡೆಸಿದ್ದು  ಕೋಸಲ ರಾಜ್ಯದಲ್ಲಿ  ಕೋಸಲ ರಾಜ್ಯದ ರಾಜ್ಯಧಾನಿ ಅಯೋಧ್ಯೆ  ಅಯೋಧ್ಯೆಯು ಸೀತಾಕಿ ರಸೋಯಿ ಮತ್ತು ಹನುಮಂತ ಮಂದಿರಗಳಿಂದ ಕೂಡಿದೆ

ರಾಜ ಬೃಹತ್ಬಲನು ಸೂರ್ಯವಂಶದ ಕಡೆಯರಾಜ ಈತನು ಮಹಾಭಾರತದಲ್ಲಿ ಅಭಿಮನ್ಯುವಿನಿಂದ ಹತನಾಗುತ್ತಾನೆ  ಅಯೋಧ್ಯೆಯ ರಾಮಮಂದಿರವನ್ನು  ರಾಜ ವಿಕ್ರಮಾದಿತ್ಯನು  ನಿರ್ಮಿಸಿದನೆಂದು ಇತಿಹಾಸದಲ್ಲಿ ಹೇಳಲಾಗುತ್ತದೆ  ಅಯೋಧ್ಯೆಯಲ್ಲಿ ದೇವಾಲಯ ಕೊಳ ಮತ್ತು ಬಾವಿಯನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಿ  ಶ್ರೀ ರಾಮನನ್ನು ಆರಾಧಿಸುತ್ತಿದ್ದನೆಂದು ಇತಿಹಾಸದಲ್ಲಿ ಹೇಳಲಾಗಿದೆ  ಶೃಂಗರಾಜ ವಂಶದ ಮೊದಲ ಆಡಳಿತಗಾರ  ಪುಷ್ಯ ಮಿತ್ರನು ಅಯೋಧ್ಯೆಯನ್ನು ನವೀಕರಿಸಿದನೆಂದು ಇತಿಹಾಸಕಾರರು ಹೇಳುತ್ತಾರೆ  ಅಯೋಧ್ಯೆ ಎರಡನೇ ಚಂದ್ರಗುಪ್ತನ ರಾಜಧಾನಿಯಾಗಿತ್ತು ಎಂದು ಶಾಸನ ಲಭ್ಯವಾಗುತ್ತದೆ  ಅಯೋಧ್ಯೆಯು 5ನೇ ಶತಮಾನದಲ್ಲಿ ಬೌದ್ಧರ ಕೇಂದ್ರವಾಗಿ ಅಭಿವೃದ್ಧಿಯಾಯಿತು  ಇಲ್ಲಿ ಅನೇಕ ತೀರ್ಥಂಕರರು  ಜನ್ಮವನ್ನು ಪಡೆದಿದ್ದಾರೆ  ಅನೇಕ ಬೌದ್ಧ ದೇವಾಲಯಗಳು ಕೂಡ ಅಯೋಧ್ಯೆಯಲ್ಲಿದೆ ಅಯೋಧ್ಯೆಯು ನಿಜವಾಗಿಯೂ ನಮ್ಮ ಪಾಲಿನ ದೇವ ನಡೆದಾಡಿದ ಭೂಮಿ  ಗತವೈಭವವನ್ನು ನೋಡಲು ಮತ್ತೆ ಅಯೋಧ್ಯೆ ಸಜ್ಜಾಗುತ್ತಿದೆ

ಜನವರಿ 22 ರಿಂದ  ಮತ್ತೆ ಅಯೋಧ್ಯೆ ನಮ್ಮೆಲ್ಲರ ಪಾಲಿನ  ಶ್ರೀ ರಾಮನ ದೇವಾಲಯವಾಗಿ  ಎಲ್ಲರ ಭಕ್ತರ ಪಾಲಿಗೂ ಶ್ರೀ ರಾಮನ ದರ್ಶನಕ್ಕಾಗಿ  ಸಿದ್ಧವಾಗಿದೆ ಶಿವ ಪಾರ್ವತಿಯರ ಸಂವಾದ ನಡೆದಾಗ ಶಿವನು ಪಾರ್ವತಿಗೆ ರಾಮನಾಮದ  ಮಹತ್ವವನ್ನು  ತಿಳಿಸುತ್ತಾನೆ ಎಂದು ವಿಷ್ಣು ಸಹಸ್ರನಾಮದಲ್ಲಿ  ಉಲ್ಲೇಖಿಸಲಾಗಿದೆ ಸಾವಿರ ದೇವನಾಮಗಳಿಗೆ ಒಂದು  ರಾಮ ನಾಮ  ಸಮವಾಗಿದೆ  ಎಂದು  ಶಿವನು ಪಾರ್ವತಿಗೆ ತಿಳಿಸುತ್ತಾನೆ  ಒಟ್ಟಾರೆಯಾಗಿ ಹೇಳುವುದಾದರೆ ಶ್ರೀ ರಾಮನ ಜನ್ಮವತ್ತಾಂತವೇ ರೋಚಕ ಭಕ್ತಿಯು ಶಕ್ತಿಯು ಇರುವ ಒಂದು ಅದ್ಭುತ ಕಥೆ  ಈ ಅದ್ಭುತ ಕಥೆಯನ್ನೇ ರಾಮಾಯಣ ಎನ್ನಲಾಗುತ್ತದೆ

ಶ್ರೀ ರಾಮ ನಾಮದಿಂದ ಜೀವನ ಧನ್ಯಗೊಳಿಸಿದ ಅನೇಕ ವೃತ್ತಾಂತಗಳನ್ನು ನಾವು ರಾಮಾಯಣದಲ್ಲಿ ಗಮನಿಸಬಹುದು ರಾಮಾಯಣ ಬರೆದ ವಾಲ್ಮೀಕಿಯ ಜೀವನ ಉನ್ನತಿಯಾದದ್ದು ಶ್ರೀ ರಾಮ ನಾಮ ಎಂಬ ಅದ್ಭುತ  ನಾಮ ಉಚ್ಚಾರಣೆಯಿಂದ ಶಬರಿಯನ್ನು ಉದ್ದರಿಸಿದ ನಾಮ ಶ್ರೀ ರಾಮ ನಾಮ   ಜಟಾಯುವಿಗೆ ಮೋಕ್ಷ ಕರುಣಿಸಿದ ನಾಮ ಶ್ರೀರಾಮ  ಹನುಮಂತನಿಗೆ  ಜೀವನವನ್ನೇ ರೂಪಿಸಿದ ನಾಮ ಶ್ರೀರಾಮ ವಿಭೀಷಣನಿಗೆ ಅಧ್ಯಾತ್ಮ  ಬೋಧಿಸಿದ ನಾಮ ಶ್ರೀರಾಮ  ಶ್ರೀ ರಾಮ ನಾಮ  ಕಡಲಿನಂತೆ ಖಾಲಿಯಾಗದ ಅದ್ಭುತ ಶಕ್ತಿ ಇರುವ ಭಕ್ತಿ ಇರುವ ನಾಮ ಅಧ್ಯಾತ್ಮವನ್ನು ಜಗತ್ತಿಗೆ ಬೋಧಿಸಿ  ತಾನು ನುಡಿದಂತೆ ನಡೆದ ಅವತಾರಕ್ಕೆ ಶ್ರೀರಾಮ ಅವತಾರ ಎನ್ನುವುದು  ಅದಕ್ಕಾಗಿಯೇ ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂಬ ಹೆಸರಿನಿಂದ  ಆರಾಧಿಸಲಾಗುತ್ತದೆ

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!