ಕುಂದಾಪುರ : ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 5 ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆ ಜರುಗಿತು
ಮೂಲತಃ ಮಣೂರು ನಿವಾಸಿಯಾದ ಸ್ಪಂದನಾ ಜಯರಾಮ ಶೆಟ್ಟಿಯವರು ಅಮೇರಿಕದಲ್ಲಿ ನೆಲೆಸಿದ್ದು ತಮ್ಮ ಮಗುವಿನ ಆರೋಗ್ಯಕ್ಕಾಗಿ ಶ್ರೀ ದೇವರಲ್ಲಿ ಪ್ರಾರ್ಧಿಸಿದ್ದು 5 ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆಯ ಹರಕೆಯನ್ನು ಪೂರೈಸಿದರು ದೇವಳದ ಪರ್ಯಾಯ ಅರ್ಚಕರಾದ ಶ್ರೀಶ ಉಪಾಧ್ಯಾಯರವರ ನೇತೃತ್ವದಲ್ಲಿ ಸೇವೆಯ ಧಾರ್ಮಿಕ ವಿಧಿ ವಿಧಾನ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶೀ ಕೆ ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಸೂರ್ಯ ನಾರಾಯಣ ಉಪಾಧ್ಯಾಯ, ಮೊಕ್ತೇಸರರಾದ ನಿರಂಜನ ಉಪಾಧ್ಯಾಯ, ಕೆ.ವಿಠಲ್ ಉವಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು