ಕುಂಭಾಸಿ : ಉಡುಪಿ ಪರ್ಯಾಯೋತ್ಸವಕ್ಕೆ ಪ್ರತಿ ಬಾರಿ ಯಂತೆ ಈ ಬಾರಿಯೂ ಹೊರೆಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನ ಸಭೆ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ತಾನದ ಸಭಾಂಗಣದಲ್ಲಿ ನಡೆಯಿತು. ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀ ಕೆ ರಮಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಮಹೋತ್ಸವ ಸಮಿತಿ ಪರವಾಗಿ ಮಠದ ದಿವಾನರಾದ ನಾಗರಾಜ ಆಚಾರ್ಯ, ಸ್ವಾಗತ ಸಮಿತಿ ಉಪಾಧ್ಯಕ್ಷ ರವೀಂದ್ರ ಆಚಾರ್ಯ. ಕಾರ್ಯದರ್ಶಿ ರಘುಪತಿ ರಾವ್ ಉಪಸ್ಥಿತರಿದ್ದರು.
ಹೊರಕಾಣಿಕೆ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ ಮಾತನಾಡಿ, ಶ್ರೀ ಪುತ್ತಿಗೆ ಮಠಾಧೀಶರ ಪರ್ಯಾಯೋತ್ಸವದಲ್ಲಿ ಹೊರಕಾಣಿಕ ” ಅರ್ಪಣೆ ಶ್ರೀಕೃಷ್ಣನಿಗೆ ಅರ್ಪಿಸುವ ವಿಶೇಷ ಸೇವೆಯಾಗಿದ್ದು, ಕುಂದಾಪುರ, ಬೈಂದೂರು ತಾಲೂಕಿನಿಂದ ಜ.12 ರಂದು ಹೊರೆಕಾಣಿಕೆ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದರು
ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಯು.ಎಸ್. ಶೆಣೈ, ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ, ಸುರೇಶ ಶೆಟ್ಟಿ, ರಾಗಿಣಿ ದೇವಾಡಿಗ ಉಪಸ್ಥಿತರಿದ್ದರು. ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮ ದರ್ಶಿ ಕೆ. ಸೂರ್ಯ ನಾರಾಯಣ ಉಪಾಧ್ಯಾಯ ಮಾತನಾಡಿದರು. ದೇವ ಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪರ್ಯಾಯ ಅರ್ಚಕರು ಭಾಗವಹಿಸಿ ದ್ದರು. ದೇವಾಲಯದ ವ್ಯವಸ್ಥಾಪಕ ನಟೇಶ ಕಾರಂತ ವಂದಿಸಿದರು.