Home » ಕುಂದಾಪ್ರ : ಅಪರಾಧ ಸುದ್ದಿಗಳು
 

ಕುಂದಾಪ್ರ : ಅಪರಾಧ ಸುದ್ದಿಗಳು

by Kundapur Xpress
Spread the love

ದನ ಕದ್ದು ಹತ್ಯೆ

ಕುಂದಾಪುರ : ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ಹಾಡಿಯ ಬಳಿ ಮಹಮದ್ ರಶೀದ್‌ ಎಂಬಾತನ ಮನೆಯ ಹಿಂದೆ ದನವನ್ನು ವಧೆ ಮಾಡಿರುವ ಬಗ್ಗೆ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಕಾರಿ ಗೇರು ಹಾಡಿಯಲ್ಲಿ ಬಿಸಾಡಿದ ರೀತಿಯಲ್ಲಿ ದನಗಳ ಕಳೇಬರಗಳು ಪತ್ತೆಯಾಗಿವೆ. ಆರೋಪಿಯು ಹಿಂದಿನಿಂದಲೂ ಇತರರೊಂದಿಗೆ ಸೇರಿಕೊಂಡು ದನಗಳನ್ನು ಕದ್ದು ಅವುಗಳ ಮಾಂಸ ಮಾರುತ್ತಿದ್ದ ಎಂಬ  ಆರೋಪ ಕೇಳಿ ಬಂದಿದೆ

ಅಕ್ರಮ ಮರಳು  ಸಾಗಾಟ

ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ದಾಕುಹಿತ್ಲು ರಿಂಗ್ ರೋಡ್‌ನಲ್ಲಿ ಬುಧವಾರ ಬೆಳಗ್ಗಿನ ಜಾವ ಮರಳು ಅಕ್ರಮ ಸಾಗಾಟ ಮಾಹಿತಿ ಹಿನ್ನೆಲೆಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಗಂಗೊಳ್ಳಿ ಎ ಎಸ್‌ ಐ ಮಂಜುನಾಥ್ ಸಿಬ್ಬಂದಿ ನಾಗರಾಜ್ ಮತ್ತು ರಾಮ ದಾಳಿ ನಡೆಸಿದ್ದು ಟಾಟಾ ಏಸ್ ವಾಹನದಲ್ಲಿ ಅಕ್ರಮ ಮರಳು ಸಾಗಾಟವನ್ನು ಪತ್ತೆ ಹಚ್ಚಿದ ಸಂದರ್ಭದಲ್ಲಿ. ಪೊಲೀಸರನ್ನು ಕಂಡು ವಾಹನ ನಿಲ್ಲಿಸಿ ಚಾಲಕ ಓಡಿಹೋಗಿದ್ದು ವಾಹನ ಪರಿಶೀಲಿಸಿದಾಗ 73 ಮರಳು ತುಂಬಿದ ಚೀಲ ಪತ್ತೆಯಾಗಿದೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಾರು ಸ್ಕೂಟರ್ ಡಿಕ್ಕಿ

ಬೈಂದೂರು : ನಾಗೂರಿನ ನೂರಿ ಐಸ್‌ ಸ್ಟ್ಯಾಂಟ್ ಸಮೀಪ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪುಟ್ಟ ಮಕ್ಕಳು ಸಹಿತ ಮೂವರು ಗಾಯಗೊಂಡಿದ್ದಾರೆ. ಕಾರು ಉಪ್ಪುಂದದಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಕಾರು ಚಾಲಕನ ಅತಿ ವೇಗ ಮತ್ತು ಆಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದ್ದು ಸವಾರ ಸಂತೋಷ್ ಹಾಗೂ ಸ್ಕೂಟರ್‌ನಲ್ಲಿ ಕುಳಿತ್ತಿದ್ದ ಪ್ರಣಮ್ಯ  (9 ವರ್ಷ), ಚಿನ್ನಯ್ (3 ವರ್ಷ) ಗಾಯಗೊಂಡಿದ್ದಾರೆ.  ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
   

Related Articles

error: Content is protected !!