Home » ಮತ್ತೆ ಮತ್ತೆ ಆನ್‌ಲೈನ್‌ ವಂಚನೆ
 

ಮತ್ತೆ ಮತ್ತೆ ಆನ್‌ಲೈನ್‌ ವಂಚನೆ

by Kundapur Xpress
Spread the love

ಉಡುಪಿ : ಬ್ಯಾಂಕ್‌ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯ ಮಾತನ್ನು ನಂಬಿದ ಮಹಿಳೆಯೊಬ್ಬರು 1 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಭಾ ಎಸ್. ಹೆಗ್ಡೆ ವಂಚನೆಗೊಳಗಾದ ಮಹಿಳೆಯಾಗಿದ್ದಾರೆ. ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ. ಈ ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿದ್ದಾನೆ.

ಇದನ್ನು ನಂಬಿದ ಪ್ರತಿಭಾ, ತನ್ನ ಕಾರ್ಡ್ ಸಂಖ್ಯೆ ಹಾಗೂ ಒಟಿಪಿಯನ್ನು ನೀಡಿದ್ದಾರೆ. ಅನಂತರ ಬ್ರಹ್ಮಾವರ ಶಾಖೆಯ ಕೆನರಾ ಬ್ಯಾಂಕ್‌ನಲ್ಲಿದ್ದ ಖಾತೆಯಿಂದ ಕ್ರಮವಾಗಿ  50,000, 50,000, 2,000 2,500 ರಂತೆ ಒಟ್ಟು 1,04,500 ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿದ್ದಾರೆ ಎಂದು ತನ್ನ ದೂರಿನಲ್ಲಿ ವಿವರಿಸಿದ್ದಾರೆ

   

Related Articles

error: Content is protected !!