ಉಡುಪಿ : ಭಗವದ್ಗೀತೆ ಎಲ್ಲರಿಗೂ ಸನ್ಮತಿ ನೀಡುವಂಥ ಗ್ರಂಥ ರಾಷ್ಟ್ರೀಯ, ಅಂತಾರಾಷ್ಟ್ರೀಯ, ವೈಯಕ್ತಿಕ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಗೀತೆಯಲ್ಲಿ ಪರಿಹಾರವಿದೆ. ಗೀತೆಯನ್ನು ನಿತ್ಯವೂ ಪಠಿಸುವುದರಿಂದ ಮನಸ್ಸಿಗೆ ಏಕಾಗ್ರತೆ ಹಾಗೂ ಶಾಂತಿ ಲಭಿಸುತ್ತದೆ ಎಂದು ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಅವರು ಮಣಿಪಾಲದ ಗ್ರಾಮ ಸೇವಾ ಪ್ರತಿಷ್ಠಾನ ಪ್ರಕಟಿಸಿರುವ ‘ಶ್ರೀ ಮಧ್ಭಗವದ್ಗೀತಾ’ ಪುಸ್ತಕವನ್ನು ಗೀತಾ ಮಂದಿರದಲ್ಲಿ ಗುರುವಾರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಗೀತೆ ಎಂದಿಗೂ ಒಂದು ಮತಕ್ಕೆ ಸೀಮಿತ ಗ್ರಂಥವಲ್ಲ ಎಲ್ಲರಿಗೂ ಸನ್ಮತಿಯನ್ನು ಕರುಣಿಸುವಂಥ ಮಹತ್ವದ ಗ್ರಂಥ ಎಂದು ಗೀತೆಯ ಮಹತ್ವದ ಕುರಿತು ಮಾತನಾಡಿದರು.ಉದಯವಾಣಿಯ ಹಿರಿಯ ಸಹಾಯಕ ಸಂಪಾದಕ ಕುಮಾರಸ್ವಾಮಿ ಸ್ವಾಗತಿಸಿ, ತರಂಗ ವಾರಪತ್ರಿಕೆಯ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ವಂದಿಸಿದರು. ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ.ನ ಮಾನವ ಸಂಪದ ವಿಭಾಗದ ಹಿರಿಯ ಮ್ಯಾನೇಜರ್ ಉಷಾರಾಣಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು