ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಉದ್ಘಾಟನೆಗೆ ಬಂದು ಕರಸೇವಕರ ಮಾರಣಹೋಮಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದರು.ಅಯೋಧ್ಯೆ ಮಂದಿರ ಲೋಕಾರ್ಪಣೆ ಆಮಂತ್ರಣ ಸ್ವೀಕರಿಸುವಲ್ಲಿ ಮೀನ-ಮೇಷ ಎಣಿಸುತ್ತಿರುವ ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕೀಯವನ್ನು ಅವರು ಟೀಕಿಸಿದರು.
ಅವರು ಶನಿವಾರ ಉಡುಪಿಯಲ್ಲಿ ಮಾತನಾಡಿ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆರಂಭದಿಂದಲೂ ರಾಮಮಂದಿರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಕರಸೇವಕರ ಮೇಲೆ ಗುಂಡಿನ ದಾಳಿ ಮಾಡಿದ ಕಾಂಗ್ರೆಸ್ನ ನಿಲುವು ಏನು ಎಂಬುದು ಜನಮಾನಸಕ್ಕೆ ಗೊತ್ತಿದೆ ಎಂದರು. ನಿರ್ಮಾಣವಾಗಿರುವುದು ಕೇವಲ ಶ್ರೀರಾಮಮಂದಿರ ಅಲ್ಲ ರಾಷ್ಟ್ರ ಮಂದಿರ ಕಾಲಘಟ್ಟ ಬದಲಾಗಿದೆ. ಖರ್ಗೆ, ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು. ಶ್ರೀರಾಮ ಮಂದಿರ ಉದ್ಘಾಟನೆಗೆ ಬರುವ ಮಾನಸಿಕತೆ ಮಾಡಿಕೊಂಡರೆ ಒಳ್ಳೆಯದು. ಚುನಾವಣೆ ಬಂದಾಗ ಹಿಂದು ಅನ್ನೋದರ ಬದಲು ನೈಜ ಹಿಂದುತ್ವ ಪ್ರದರ್ಶಿಸಿ ಕಾಂಗ್ರೆಸ್ ನವರು ಚುನಾವಣಾ ಹಿಂದುಗಳಾಗದಿರಲಿ ಎಂದರು