Home » ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಅಗತ್ಯ
 

ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಅಗತ್ಯ

ಗಣೇಶ್‌ ಹೆಗ್ಡೆ ಕುಂದಾಪುರ

by Kundapur Xpress
Spread the love

ಕುಂದಾಪುರ : ಆಧುನಿಕ ಸ್ಪರ್ಧಾ ಯುಗದ ಕಾಲಘಟ್ಟದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಕ್ರೀಡೆ ಹಾಗೂ ವ್ಯಾಯಾಮಗಳು ಅತೀ ಮುಖ್ಯವಾಗಿದೆ ಕ್ರೀಡೆಯು ಶಿಕ್ಷಣದ ಒಂದು ಭಾಗವಾಗಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಅತೀ ಅಗತ್ಯವಾಗಿದೆ ಎಂದು ಕುಂದಾಪ್ರ ಎಕ್ಸ್‌ ಪ್ರೆಸ್‌ ಸಾಮಾಜಿಕ ಜಾಲತಾಣದ ಸುದ್ದಿ ಪತ್ರಿಕೆಯ ಸಂಪಾದಕರಾದ ಗಣೇಶ್‌ ಹೆಗ್ಡೆ ನುಡಿದರು ಅವರು ಕೋಡಿಯ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು

ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ನಾಗೇಶ್‌ ಕಾಮತ್‌ ಮಾತನಾಡಿ ನಮ್ಮ ಶಾಲೆಯಲ್ಲಿ ಶಿಕ್ಷಣಕ್ಕೆ ಕೊಟ್ಟಷ್ಟೇ ಮಹತ್ವವನ್ನು ಕ್ರೀಡೆಗೂ ನೀಡುತ್ತಿದ್ದು ಸ್ಪರ್ಧಾಳುಗಳು ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕೆಂದು ಕರೆಯಿತ್ತರು  ಪ್ರಾಂಶುಪಾಲರಾದ ಜಿತೇಂದ್ರರವರು ವೇದಿಕೆಯಲ್ಲಿದ್ದರು

ಶ್ರೀಮತಿ ನಾಗರತ್ನ ಕಾರ್ಯಕ್ರಮ ನಿರೂಪಿಸಿ ಕುಮಾರಿ ಚೇತನ ಧನ್ಯವಾದವಿತ್ತರು ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀರಾಮ್‌ ಉಪಸ್ಥಿತರಿದ್ದರು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು ಸಂಚಾಲಕರಾದ ನಾಗೇಶ್‌ ಕಾಮತ್‌ ಗೌರವರಕ್ಷೆ ಸ್ವೀಕರಿಸಿದರು

   

Related Articles

error: Content is protected !!