Home » ಪಿಯುಸಿ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ
 

ಪಿಯುಸಿ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ

by Kundapur Xpress
Spread the love

ಕುಂದಾಪುರ : ಕುಂದಾಪುರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಬೆಳೆಸುವಲ್ಲಿ ಕೊಡುಗೆ ನೀಡುವ ಸಾಮಾಜಿಕ ಕಳಕಳಿಯ ಸಲುವಾಗಿ  KundapurXpress ಈ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ “PUC CROSSROADS” ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಪಿಯುಸಿ ಬಳಿಕದ ಶಿಕ್ಷಣದ ಆಯ್ಕೆಗಳು ಎನ್ನುವ ಉಚಿತ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ

ಈ ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು ವಿದ್ಯಾರ್ಥಿಗಳಿಗೆ  ಪಿಯುಸಿ ಪರೀಕ್ಷೆಗೆ ತಯಾರಾಗುವುದು ಹೇಗೆ ಸಮಯ ನಿರ್ವಹಣಾ ಕೌಶಲ್ಯ ವಿಷಯವಾರು ಅಧ್ಯಯನ ತಂತ್ರ ಪಿಯುಸಿ ನಂತರ ಮುಂದೇನು ವಿಷಯದ ಬಗ್ಗೆ ನುರಿತ ಶಿಕ್ಷಣ ತಜ್ಞರೊಂದಿಗೆ ಸಂವಾದ ಎನ್ನುವ ವಿಷಯದ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಜೊತೆಗೆ ಪಿಯುಸಿ ನಂತರ ಇರುವ ಶೈಕ್ಷಣಿಕ ಅವಕಾಶಗಳನ್ನು ಹೊಂದಿರುವ ಸಮಗ್ರ ಕೈಪಿಡಿಯನ್ನು ನೀಡುತ್ತಿದ್ದಾರೆ

ಪಿಯುಸಿ ವಿದ್ಯಾರ್ಥಿಗಳ ಕಾರ್ಯಗಾರವು ಜನವರಿ 6 ರಂದು ನಾಳೆ ಶನಿವಾರ ಮಧ್ಯಾಹ್ನ 2.00 ರಿಂದ ಸಂಜೆ 4:30 ರ ವರೆಗೆ ಕುಂದಾಪುರದ ಚಿಕ್ಕನ ಸಾಲ್‌ ರಸ್ತೆಯಲ್ಲಿರುವ ಮೋಗವೀರ ಭವನದಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳು ಈ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆಯಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ

   

Related Articles

error: Content is protected !!