ಟೆಂಪೋ ಬೈಕ್ ಢಿಕ್ಕಿ ಸವಾರರಿಬ್ಬರಿಗೆ ಗಾಯ
ಶಿರ್ವ : ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ತೂರು ಅಂಗಡಿಗುತ್ತು ಕ್ರಾಸ್ ಬಳಿ ಕುತ್ಯಾರು ಆನೆಗುಂದಿ ಮಠದಿಂದ ಶಾಂತಿಗುಡ್ಡೆಗೆ ಹೋಗುತ್ತಿದ್ದ ಬೈಕ್ಗೆ ಶಾಂತಿಗುಡ್ಡೆ ಕಡೆಯಿಂದ ಬಂದ ಟೆಂಪೋ ಢಿಕ್ಕಿ ಹೊಡೆದು ಬೈಕ್ ಸವಾರ ರುದ್ರೇಶ್ ಮತ್ತು ಸಹ ಸವಾರ ಲೋಲಾಕ್ಷ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇಲಿ ಪಾಷಾಣ ಸೇವಿಸಿದ ಮಹಿಳೆ ಸಾವು
ಕುಂದಾಪುರ : ಹೆಂಗವಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ (40ವರ್ಷ) ಎಂಬವರು ಇಲಿ ಪಾಷಾಣ ಸೇವಿಸಿ ಮೃತಪಟ್ಟಿದ್ದಾರೆ ಇವರು ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಚಿಕಿತ್ಸೆಯ ಬಳಿಕವೂ ಖಾಯಿಲೆ ಗುಣಮುಖವಾಗದ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೊಳಗಾಗಿದ್ದರು ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ
ಸೈಬರ್ ವಂಚನೆ
ಉಡುಪಿ : ಹೆಬ್ರಿಯ ನಿವಾಸಿ ರಾಘವೇಂದ್ರ ಅವರಿಗೆ ಜನವರಿ 3 ರಂದು ವಾಟ್ಸಪ್ನಲ್ಲಿ ಅಪರಿಚಿತ ವ್ಯಕ್ತಿ ಮೊಬೈಲ್ ಸಂದೇಶ ಕಳುಹಿಸಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದು, 18.13 ಲಕ್ಷ ರೂಪಾಯಿಯನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಉಡುಪಿಯ ಸೆನ್ ದೂರು ದಾಖಲಾಗಿದೆ