ಕುಂದಾಪುರ: ತುಳುನಾಡಿನ ಆರಾಧ್ಯ ದೇವರು ಹಾಗೂ ಮಾರಣಕಟ್ಟೆಯಲ್ಲಿ ನೆಲೆನಿಂತ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಜ.15ರಂದು ಮಕರ ಸಂಕ್ರಮಣ ಉತ್ಸವ ಜರುಗಲಿದೆ.ಅಂದು ಬೆಳಗ್ಗೆ 9.00 ಗಂಟೆಗೆ ದೇವರ ಸನ್ನಿಧಿಯಲ್ಲಿ ಮಹಾ ಮಂಗಳಾರತಿ, ರಾತ್ರಿ 10.30 ಗಂಟೆಗೆ ಗೆಂಡಸೇವೆ, ಜ.16ರಂದು ಬೆಳಗ್ಗೆ 9.30 ಮಹಾ ಮಂಗಳಾರತಿ, ನಂತರ ಮಂಡಲ ಸೇವೆ ಜ.17ರಂದು ಬೆಳಗ್ಗೆ 9.30ಗಂಟೆಗೆ ಮಹಾಮಂಗಳಾರತಿ, ಮಂಡಲ ಸೇವೆ, ರಾತ್ರಿ 8ಗಂಟೆಗೆ ಕಡುಬು ನೈವೇದ್ಯ, ಮಹಾಮಂಗಳಾರತಿ ಬಳಿಕ ಯಕ್ಷಗಾನ ಬಯಲಾಟ ನಡೆಯಲಿದೆ. ಜಾತ್ರೋತ್ಸವದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಗೆಂಡಸೇವೆ, ಮಂಡಲ ಸೇವೆ, ಮಹಾಪೂಜೆ ನಡೆಯುವ ವೇಳೆ ಪೂಜೆ, ಹಣ್ಣುಕಾಯಿ ಸೇವೆ ಇರುವುದಿಲ್ಲ ಎಂದು ದೇವಳದ ಮೊಕ್ತೇಸರರಾದ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ