Home » ಕಳವು ಪ್ರಕರಣ ದಾಖಲು
 

ಕಳವು ಪ್ರಕರಣ ದಾಖಲು

by Kundapur Xpress
Spread the love
ಬೈಕ್  ಕಳವು

ಉಡುಪಿ : ಕರಾವಳಿ ಬೈಪಾಸ್ ಬಳಿಯ ಹೊಟೇಲ್ ಎದುರು ನಿಲ್ಲಿಸಿದ್ದ ಸಂತೆಕಟ್ಟೆ ಪುತ್ತೂರಿನ ಮಹಮದ್‌ ಇರ್ಫಾನ್ ಅವರಿಗೆ ಸೇರಿದ  ಬೈಕ್ ಕಳವಾಗಿದೆ. ಅವರು ತನ್ನ ಪರಿಚಯದ ರೋಹಿತ್ ಅವರಿಗೆ ಬೈಕ್ ಅನ್ನು ಒಂದು ವಾರದ ಮಟ್ಟಿಗೆ ಉಪಯೋಗಿಸಲು ನೀಡಿದ್ದರು ನವರಿ 13ರಂದು ರೋಹಿತ್ ಅವರು ಕೆಲಸ ಮುಗಿಸಿ ಹೊಟೇಲೊಂದರ ಬಳಿ ನಿಲ್ಲಿಸಿದ್ದರು. ಮರುದಿನ ನೋಡುವಾಗ ಬೈಕ್ ಕಳವಾಗಿತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಚಿನ್ನಾಭರಣ ಕಳವು

ಕುಂಭಾಸಿ : ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಚಿನ್ನಾಭರಣ ಕಳವು ನಡೆದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಭಟ್ಕಳ ನಿವಾಸಿ ಲೋಕೇಶ್ ಅವರ ಮಾವ ನಾರಾಯಣ ಮದುವೆಯ ಪ್ರಯುಕ್ತ 51,900 ಗ್ರಾಂ ಚಿನ್ನದ ಕರಿಮಣಿ ಸರ, 4 ಗ್ರಾಂ ಚಿನ್ನದ ಉಂಗುರ ಖರೀದಿ ಮಾಡಿ ಅದನ್ನು ಪರ್ಸ್‌ನಲ್ಲಿಟ್ಟು ಪತ್ನಿಯ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿ ದೇವರ ದರ್ಶನ ಪಡೆದಿದ್ದು, ಹೊರಗಡೆ ಬಂದು ನೋಡುವಾಗ ಬ್ಯಾಗ್‌ನ ಜಿಪ್ ತೆರೆದಿದ್ದು, ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಇರಿಸಿದ್ದ ಪರ್ಸ್ ಕೂಡ ನಾಪತ್ತೆಯಾಗಿದೆ ಈ ಕಳ್ಳತನ ಪ್ರಕರಣವು ಡಿಸೆಂಬರ್‌ 27 ರಂದು ನಡೆದಿದ್ದು ಲೋಕೇಶ್‌ ಎಂಬವರು ದೂರು ನೀಡಿರುತ್ತಾರೆ

   

Related Articles

error: Content is protected !!