Home » ಶೃಂಗಾರಗೊಂಡ ಉಡುಪಿ ನಗರ
 

ಶೃಂಗಾರಗೊಂಡ ಉಡುಪಿ ನಗರ

by Kundapur Xpress
Spread the love

ಉಡುಪಿ : ಉಡುಪಿಯ ನಾಡಹಬ್ಬ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ನಾಲ್ಕನೇ ಬಾರಿ ಸರ್ವಜ್ಞ ಪೀಠವೇರಲಿರುವ ಹಿನ್ನೆಲೆಯಲ್ಲಿ ಉಡುಪಿ ನಗಕ್ಕೆ ನಗರವೇ ಅಲಂಕಾರದಿಂದ ಶೋಭಿಸುತ್ತಿದೆ. ಪೂರ್ವತಯಾರಿ ಭರದಿಂದ ಸಾಗಿದ್ದು  

ಸ್ವಾಗತ ಕಮಾನು  ಗೂಡುದೀಪ ಭಗವಾಧ್ವಜ  ಬ್ಯಾನರ್ ಪ್ಲೆಕ್ಸ್‌ಗಳಿಂದ ನಗರ ಕಂಗೊಳಿಸುತ್ತಿದೆ. ಜೋಡುಕಟ್ಟೆ, ಡಯಾನಾ ಸರ್ಕಲ್, ಲಯನ್ಸ್ ಸರ್ಕಲ್‌, ತೆಂಕಪೇಟೆ, ಸಂಸ್ಕೃತ ಕಾಲೇಜು ರಸ್ತೆ, ಕೋರ್ಟ್ ರಸ್ತೆ ಸೇರಿದಂತೆ ವಿವಿಧೆಡೆ ಬೃಹದಾಕಾರದ ಸ್ವಾಗತ ಕಮಾನುಗಳು ಕಣ್ಮನ ಸೆಳೆಯುತ್ತಿವೆ

ಕಿನ್ನಿಮೂಲ್ಕಿಯಿಂದ ಉಡುಪಿ ರಥಬೀದಿಯವರೆಗೆ ಪರ್ಯಾಯ ಮೆರವಣಿಗೆ ಬರುವ ಮಾರ್ಗದಲ್ಲಿ ಸಂಪೂರ್ಣ ವಿದ್ಯುತ್ ಅಲಂಕಾರಗಳಿಂದ ಉಡುಪಿ ನಗರವು ಶೃಂಗಾರಗೊಂಡಿದೆ ಇದೇ ಮೊದಲ ಬಾರಿ ಕಾಪು ದಂಡತೀರ್ಥದಿಂದ ಸಂಪೂರ್ಣ ಮೆರವಣಿಗೆ ಹಾದಿಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ

ವಸತಿಗೃಹಗಳು ಭರ್ತಿ

ಇಂದು ನಾಳೆ ನಡೆಯುವ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಉಡುಪಿ ನಗರದ ಎಲ್ಲ ಲಾಡ್ಜ್, ವಸತಿಗೃಹ, ಶ್ರೀಕೃಷ್ಣ ಮಂದಿರದ ವಸತಿಗೃಹಗಳು ಬುಕ್‌ ಆಗಿದ್ದು ವಿಧ್ವಾಂಸರು ಗಣ್ಯರು ವಿದೇಶಿ ಅತಿಥಿಗಳು ಧಾರ್ಮಿಕ ಮೂಖಂಡರು ಪುತ್ತಿಗೆಯಲ್ಲಿ ಬೀಡುಬಿಟ್ಟಿದ್ದಾರೆ ಅನೇಕ ಪ್ರವಾಸಿಗರು ಭಕ್ತರು ಆರು ತಿಂಗಳ ಹಿಂದೆಯೇ ಆನ್‌ಲೈನ್ ನಲ್ಲಿ ಮುಂಗಡವಾಗಿ  ಕಾಯ್ದಿರಿಸಿಕೊಂಡಿದ್ದಾರೆ

 

   

Related Articles

error: Content is protected !!