ಉಡುಪಿ: ಭಾರತದ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಆಂಧ್ರದ ಲೇಪಾಕ್ಷಿಯಲ್ಲಿ ಶ್ರೀಪುತ್ತಿಗೆ ಮಠದ ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು ಶ್ರೀಮಠದ ಶಿಷ್ಯರಾದ ತಿರುಪತಿಯ ಶ್ರೀವೇಂಕಟೇಶ ಹೆಚ್.ಎಸ್ ಅವರು ನೀಡಿದರು. ಹದಿನಾಲ್ಕು ವರ್ಷಗಳ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡು ಪರ್ಯಾಯ ಸಂಭ್ರಮಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅತ್ಯಂತ ಗೌರವ ಹಾಗೂ ಸಂತೋಷದಿಂದ ಶ್ರೀಮಠದ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿದರು . ಸಂದೇಶವನ್ನು ಕಳಿಸುವುದಾಗಿ ತಿಳಿಸಿದರು.