ಕುಂದಾಪುರ : ಡಿಸೆಂಬರ್ 27 ರಂದು ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ
ಮದುವೆ ನಿಮಿತ್ತ ಕುಂದಾಪುರದ ಚಿನ್ನದ ಮಳಿಗೆಯಲ್ಲಿ ಕರಿಮಣಿ ಸರ ಖರೀದಿಸಿ ತಂದು ಬ್ಯಾಗಿನಲ್ಲಿಟ್ಟು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಪೂಜೆಯಲ್ಲಿದ್ದಾಗ ಬ್ಯಾಗಿನಲ್ಲಿದ್ದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಣಭರಣವನ್ನು ಕಳವುಗೈದ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಹುಬ್ಬಳ್ಳಿ ಬೆಂಡಗೇರಿ ಮೂಲದವರಾದ ಬೀಬಿ ಜಾನ್ (58 ವರ್ಷ) ಹಾಗೂ ಪಾರವ್ವ (54ವರ್ಷ) ಎಂಬ ಇಬ್ಬರು ಕಳ್ಳಿಯರನ್ನು ಬಂಧಿಸಿದ್ದಾರೆ
ಪ್ರಕರಣ ದಾಖಲಾದ ತಕ್ಷಣವೇ ತನಿಖೆ ಕೈಗೆತ್ತಿಕೊಂಡ ನಂದಕುಮಾರ್ ನೇತೃತ್ವದ ಪೊಲೀಸರ ತಂಡವು ಸಿಸಿ ಟಿವಿ ಮತ್ತು ಇತರ ತಾಂತ್ರಿಕ ದಾಖಲೆ ವಿಶ್ಲೇಷಣೆ ಮೂಲಕ ಪ್ರಕರಣ ದಾಖಲಾದ 3-4 ದಿನದಲ್ಲಿ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಕಳವುಗೈದ 3.5 ಲಕ್ಷ ಮೌಲ್ಯದ 51.900 ಗ್ರಾಂ ತೂಕದ ಚಿನ್ನದ ಕರಿಮಣಿಯನ್ನು ವಶಕ್ಕೆ ಪಡೆದಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ, ಎಸ್.ಟಿ ಸಿದ್ಧಲಿಂಗಪ್ಪ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ನೇತೃತ್ವದಲ್ಲಿ, ಕುಂದಾಪುರ ನಗರ ಠಾಣೆ ನಿರೀಕ್ಷಕ ಯು.ಬಿ.ನಂದಕುಮಾರ್, ಉಪ ನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ, ಕ್ರೈಂ ವಿಭಾಗದ ಪಿ ಎಸ್ ಐ ಪ್ರಸಾದ್ ಕುಮಾರ್ ಕೆ., ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಶ್ರೀಧರ್, ರಾಮ ಪೂಜಾರಿ, ಮೋನಿಕಾ, ಪದ್ಮಾವತಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದರು