ಕುಂದಾಪುರ : ಕುಂದಾಪುರ ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಬೈಕ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ ಆರೊಪಿಯನ್ನು ಬೈಂದೂರು ತಾಲೋಕಿನ ಕಾಲ್ತೋಡು ಬಳಿಯ ನಿವಾಸಿಯಾದ ನಾರಾಯಣ ಪೂಜಾರಿಯವರ ಮಗ ರಂಜಿತ್ ಪೂಜಾರಿ (25) ಎಂದು ಗುರುತಿಸಲಾಗಿದೆ
ಅನಂತ ಹೆಬ್ಬಾರ್ ಎಂಬವರು ತನ್ನ ಸ್ಪ್ಲೆಂಡರ್ ಬೈಕ್ನ್ನು ಭಂಡಾರ್ಕಾರ್ಸ್ ರಸ್ತೆಯ ಸರಕಾರಿ ನೌಕರರ ಸಂಘದ ಬಳಿಯಲ್ಲಿ ದಿನಾಂಕ 26.11 2023ರಂದು ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು ಸಂಜೆ ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು ಈ ಬಗ್ಗೆ ಅವರು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು
ತನಖೆ ಕೈಗೆತ್ತಿಕೊಂಡ ಕುಂದಾಪುರ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಆರೋಪಿ ರಂಜಿತ್ ಪೂಜಾರಿಯನ್ನು ಬಂಧಿಸಿ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ
ಕುಂದಾಪುರದ ಡಿ ವೈ ಎಸ್ ಪಿ ಬೆಳ್ಳಿಯಪ್ಪನವರ ಮಾರ್ಗದರ್ಶನದಲ್ಲಿ ಕುಂದಾಪುರ ಠಾಣಾ ನಿರೀಕ್ಷಕರಾದ ನಂದಕುಮಾರ್ ಅವರ ನೇತೃತ್ವದಲ್ಲಿ ಠಾಣಾಧಿಕಾರಿಗಳಾದ ವಿನಯ್ ಕೊರ್ಲಹಳ್ಳಿ ಹಾಗೂ ಪ್ರಸಾದ್ ಕುಮಾರ್ ಮತ್ತು ಸಿಬ್ಬಂದಿಗಳಾದ ಸಂತೋಷ ಕುಮಾರ್ ರಾಮ ಪೂಜಾರಿ ಶ್ರೀಧರ್ ಮತ್ತು ಬೈಂದೂರು ಠಾಣಾ ಅಪರಾಧ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು