Home » ಮಹಿಳೆಯರ ಸಾಮರ್ಥ್ಯ ಅನಾವರಣ
 

ಮಹಿಳೆಯರ ಸಾಮರ್ಥ್ಯ ಅನಾವರಣ

75ನೇ ಗಣರಾಜ್ಯೋತ್ಸವ

by Kundapur Xpress
Spread the love

ಹೊಸದಿಲ್ಲಿ : 75ನೇ ಗಣರಾಜ್ಯೋತ್ಸವದಂತಹ ಮಹತ್ವದ ಸಂದರ್ಭದಲ್ಲಿ ಇದೇ ಮೊದಲ ಬಾರಿ ಮಹಿಳಾ ನೇತೃತ್ವದಲ್ಲಿ ಸಂಪೂರ್ಣ ಮಹಿಳೆಯರನ್ನೇ ಒಳಗೊಂಡಿದ್ದ ತ್ರಿ-ಸೇನಾ ತುಕಡಿಯು ಕರ್ತವ್ಯ ಪಥದಲ್ಲಿ ಪಥಸಂಚಲನ ನಡೆಸುವ ಮೂಲಕ ನಾರಿ ಶಕ್ತಿ ಅನಾವರಣಗೊಂಡಿತು. ಈ ಮೂಲಕ ಗಣರಾಜ್ಯೋತ್ಸವದ ಕೇಂದ್ರ ಬಿಂದು ಎನ್ನಲಾಗುವ ಪರೇಡ್ ಮಹಿಳಾ ಕೇಂದ್ರಿತವಾಗಿಸುವುದರೊಂದಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಬಿಂಬಿಸಲಾಯಿತು

ಈ ಬಾರಿ ದೇಶ 75ನೇ ಗಣರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಹೆಮ್ಮೆ ಒಂದೆಡೆ ಯಾದರೆ, ಮತ್ತೊಂದೆಡೆ ರಾಷ್ಟ್ರದ ಆತ್ಮನಿರ್ಭರ ಮಿಲಿಟರಿ ಸಾಮರ್ಥ್ಯದೊಂದಿಗೆ ಪ್ರಗತಿ ಹೊಂದುತ್ತಿರುವ ನಾರಿಶಕ್ತಿಗೆ ಕರ್ತವ್ಯ ಪಥ ಸಾಕ್ಷಿಯಾಯಿತು. ಇದೇ ವೇಳೆ ರಾಷ್ಟ್ರಪತಿ ಬ್ರೌಪದಿ ಮುರ್ಮು ತ್ರಿವರ್ಣ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಗಣರಾಜ್ಯೋತ್ಸವ ಆಚರಣೆ ಆರಂಭಗೊಂಡು ನಾರಿ ಶಕ್ತಿ ಪರಿಕಲ್ಪನೆಗೆ ಮತ್ತಷ್ಟು ಪುಷ್ಟಿ ನೀಡಿತು. ಈ ಬಾರಿಯ ಗಣ ರಾಜ್ಯೋತ್ಸವ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು

   

Related Articles

error: Content is protected !!