Home » ಜಿ ಎಸ್‌ ಟಿ ವಿನಾಯಿತಿಗೆ ಒತ್ತಾಯಿಸಿ
 

ಜಿ ಎಸ್‌ ಟಿ ವಿನಾಯಿತಿಗೆ ಒತ್ತಾಯಿಸಿ

ಜೆ ಪಿ ಹೆಗ್ಡೆ

by Kundapur Xpress
Spread the love

ಕುಂದಾಪುರ :ಕ್ಯಾನ್ಸರ್ ರೋಗ ನಿವಾರಕ ಔಷಧಗಳ ಮೇಲಿನ ಜಿಎಸ್‌ಟಿ ಬಡ ರೋಗಿಗಳಿಗೆ ಹೊರೆಯಾಗುತ್ತಿದೆ. ಅವರಿಂದ ಕೋಟ್ಯಂತರ ರೂಪಾಯಿ ವ್ಯಯಿಸಲು ಸಾಧ್ಯವಾಗದು. ಒಂದೇ ಮಾದರಿಯ ಔಷಧಗಳನ್ನು ಹಲವು ಕಂಪನಿಗಳು ತಯಾರಿಸು ತ್ತಿದ್ದು, ಅವುಗಳಿಗೆ ಬೇರೆ ಬೇರೆ ದರಗಳಿವೆ. ಈ ಹೊರೆಯೇ ಕಷ್ಟಕರವಾಗಿರುವ ಜಿಎಸ್‌ಟಿ ಬರೆ ಬೇರೆ ಎಲ್ಲ ವೈದ್ಯರು ಕ್ಯಾನ್ಸರ್ ನಿವಾರಕ ಔಷಧಗಳ ಮೇಲಿನ ಜಿಎಸ್‌ಟಿ ತೆರವಿಗೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು

ಇಲ್ಲಿನ ಚಿನ್ಮಯಿ ಆಸ್ಪತ್ರೆಯಲ್ಲಿ ಯೆನೆಪೋಯ ವೈದ್ಯಕೀಯ ಮಹಾ ವಿದ್ಯಾಲಯದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ ಸಹಯೋಗದಲ್ಲಿ ಆರಂಭಿಸಲಾಗಿರುವ ಕ್ಯಾನ್ಸರ್ ವಿಭಾಗ ತ್ತು ಟೆಲಿ ಮೆಡಿಸಿನ್ ಕೆಂದ್ರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು ಯೆನೆಪೋಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದ‌ರ್, ಯೇನಪೋಯ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಫರಾದ್  ಮೆಡಿಕಲ್ ಅಧೀಕ್ಷಕ ಡಾ ಅಬೀಬುಲ್ ರೆಹಮಾನ್ ಚಿನ್ಮಯಿ ಆಸತ್ರೆಯ ಆಡಳಿತ ನಿರ್ಧೇಶಕರಾದ ಉಮೇಶ್‌ ಪುತ್ರನ್ ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ  ಡಾ.ಮೋಹನ ಕಾಮತ್, ಡಾ.ಬಾಲಕೃಷ್ಣ ಶೆಟ್ಟಿ, ಡಾ.ದಿನೇಶ್‌ ಕುಮಾರ ಶೆಟ್ಟಿ ಡಾ. ಶ್ರೀದೇವಿ ಕಟ್ಟೆ ಆಸ್ಪತ್ರೆಯ ವ್ಯವಸ್ಥಾಪಕ ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು

ಬ್ರಹ್ಮಾವರದಲ್ಲಿ ಪ್ರಾರಂಭವಾಗುವ ರಾಷ್ಟೋತ್ಥಾನ ಪರಿಷತ್‌ ಶಿಕ್ಷಣ ಸಂಸ್ಥೆಗೆ 5 ಲಕ್ಷ ರೂ. ದೇಣಿಗೆಯನ್ನು ಆಸ್ಪತ್ರೆ ವತಿಯಿಂದ ನೀಡಲಾಯಿತು. ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು ಹಿರಿಯ ಪತ್ರಕರ್ತರಾದ ಯು ಎಸ್‌ ಶಣೈ ಕಾರ್ಯಕ್ರಮ ನಿರೂಪಿಸಿದರು

   

Related Articles

error: Content is protected !!