ರಾಮಕ್ಷತ್ರೀಯ ಯುವಕ ಮಂಡಳಿ
ಅಧ್ಯಕ್ಷರಾಗಿ ಮಹೇಶ್ ಬೆಟ್ಟಿನ್ ಆಯ್ಕೆ
ಕುಂದಾಪುರ:ಸ್ಥಳೀಯ ರಾಮಕ್ಷತ್ರೀಯ ಯುವಕ ಮಂಡಳಿಯ
2023-24 ನೇ ಸಾಲಿನ ಅಧ್ಯಕ್ಷರಾಗಿ ಮಹೇಶ್ ಬೆಟ್ಟಿನ್ ಆಯ್ಕೆಯಾಗಿದ್ದಾರೆ
ಯುವಕ ಮಂಡಳಿಯ 57ನೇ ಮಹಾಸಭೆಯಲ್ಲಿ ಉದ್ಯಮಿ ಮಹೇಶ್ ಬೆಟ್ಟಿನ್ರವರನ್ನು
ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು
ನೂತನ ಕಾರ್ಯದರ್ಶಿಯಾಗಿ ಕೆ ಬಿ ವಿಷ್ಣು ಕೋಶಾಧಿಕಾರಿಯಾಗಿ
ನಾಗರಾಜ್ ದಫೇದಾರ್ ನಿಯುಕ್ತಿಗೊಂಡರು
ಕುಂದಾಪುರ ರಾಮಕ್ಷತ್ರೀಯ ಸಂಘದ ಅಧ್ಯಕ್ಷರಾದ
ಡಿ ಕೆ ಪ್ರಭಾಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು
ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಇಂಜಿನಿಯರ್ ಹಾಗೂ ಖಜಾಂಚಿ
ಮೆಟ್ರೊ ನಾಗರಾಜ್ ಉಪಸ್ಥಿತರಿದ್ದು 2024-25ನೇ
ಸಾಲಿನ ನಿಯೋಜಿತ ಅಧ್ಯಕ್ಷರಾಗಿ ನೇರಂಬಳ್ಳಿ ಪ್ರಭಾಕರ ಆಯ್ಕೆಯಾದರು