ಕುಂದಾಪುರ : ತೆಕ್ಕಟ್ಟೆ ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿ ಭಾರತ ಸಂವಿಧಾನ ಜಾಗೃತಿಯ ಜಾಥದ ಉದ್ಘಾಟಿನೆಯನ್ನುಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ನೆರವೇರಿಸಿದರು ಅವರು ಮಾತನಾಡಿ ಪ್ರತಿ ವರ್ಷ ನವೆಂಬರ್ 26ರಂದು ಭಾರತ ಸಂವಿಧಾನ ದಿನವನ್ನು ಆಚರಿಸುತ್ತಿದ್ದು ಭಾರತದ ಸಂವಿಧಾನವನ್ನು ಅಂಗೀಕರಿಸುವುದನ್ನು ಗೌರವಿಸಲು ಮೀಸಲಾಗಿರುವ ದಿನವಾಗಿದೆ, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಆಳವಾಗಿ ಬೇರೂರಿರುವ ಭಾರತಕ್ಕೆ ಸಂವಿಧಾನದ ದಿನವು ಅಪಾರ ಮಹತ್ವದಾಗಿದೆ ಎಂದರು. ಈ ಸಂದರ್ಭದಲ್ಲಿ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಶ್ರೀಮತಿ ರಶ್ಮಿ, ತಹಶೀಲ್ದಾರ್ ಶ್ರೀಮತಿ ಶೋಭಾ ಲಕ್ಷ್ಮಿ,ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಂ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶೋಭನಾ ಶೆಟ್ಟಿ ಪಿಡಿಒ ಸುನಿಲ್ ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರು, ಇಲಾಖೆಯ ಪ್ರಮುಖರು ಉಪಸ್ಥಿತರಿದ್ದರು