ಕೊಲ್ಲೂರು : ಕೊಲ್ಲೂರು ಸಮೀಪದ ವಂಡ್ಸೆ ಗ್ರಾಮದಲ್ಲಿ ವಾಸವಾಗಿರುವ ಅಬ್ದುಲ್ ರೆಹಮಾನ್ ರವರ ಪತ್ನಿ ಅಪ್ಸಾನ (23 ವರ್ಷ) ಎಂಬವರು ಜನವರಿ 30ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ
ಅಪ್ಸಾನ ಜನವರಿ 30 ರಂದು ರಾತ್ರಿ 11:00 ಗಂಟೆಗೆ ರೂಮಿನಲ್ಲಿ ಮಲಗಿದ್ದರು 31ರಂದು ಬೆಳಿಗ್ಗೆ 10:00 ಗಂಟೆಯಾದರೂ ರೂಮ್ನಿಂದ ಹೊರಗೆ ಬಾರದ ಕಾರಣ ಆಪ್ಸಾನಾರವರ ಅತ್ತೆ ಜುನಿಯಾರವರು ರೂಮ್ಗೆ ಹೋಗಿ ನೋಡಿದಾಗ ಅಪ್ಸಾನಾರವರು ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದ್ದು ಸುತ್ತಾಮುತ್ತಲೂ ಹುಡುಕಾಡಿದರೂ ಸಿಕ್ಕಿರುವುದಿಲ್ಲ.
ಅಪ್ಸನ್ ಪತಿ ಅಬ್ದುಲ್ ರೆಹಮಾನ್ ಗೋವಾದ ಮೊಬೈಲ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ರೂಮಿನಲ್ಲಿ ನಾನು ತುಂಬ ದೂರ ಹೋಗುತ್ತಿದ್ದೇನೆ ನನ್ನನ್ನು ಹುಡುಕಬೇಡಿ ಎಂದು ಚೀಟಿ ಬರೆದಿಡಲಾಗಿತ್ತು
5.4 ಅಡಿ ಎತ್ತರ ಕೋಲು ಮುಖ ಗೋದಿ ಮೈಬಣ್ಣ ಸಾಧಾರಣ ಶರೀರ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದು ಬಲಗೈಯಲ್ಲಿ ಹಳೆಯ ಗಾಯದ ಗುರುತಿಸಿದೆ ಉರ್ದು ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ ಈ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ