ಉಡುಪಿ : ದೇಶದ ವಿತ್ತ ಸಚಿವರು ಮಂಡಿಸಿದ ಕೇoದ್ರ ಬಜೆಟ್ ಸ್ಪಷ್ಟ, ದೂರಗಾಮಿ ಪರಿಣಾಮವುಳ್ಳ ಅತ್ಯುತ್ತಮ ಬಜೆಟ್ ಆಗಿದೆ. ಕೊಟ್ಟ ಮಾತಿನಂತೆ ನಡೆದುಕೊಂಡು ದೇಶವನ್ನು ಮುನ್ನಡೆಸಲು, ದೇಶದ ಆರ್ಥಿಕತೆಯನ್ನು ಪ್ರಪಂಚದ 3ನೇ ಅತಿ ದೊಡ್ಡ ಆರ್ಥಿಕತೆ ಮಾಡಲು ಇಂತಹ ಬಜೆಟ್ ಅತಿ ಮುಖ್ಯವಾಗಿದೆ. ಹತ್ತಿರದಲ್ಲೇ ಚುನಾವಣೆ ಇದ್ದರೂ ಯಾವುದೇ ಜನ ಮರುಳು ಕಾರ್ಯಕ್ರಮ ಮಂಡಿಸದೆ, ಯಾವುದೇ ಪ್ರಾದೇಶಿಕ ಪ್ರಾಮುಖ್ಯತೆ ನೀಡದೇ ದೇಶದ ಅಭಿವೃದ್ಧಿ ಒಂದೇ ಮೂಲ ಮಂತ್ರ ಎಂಬ ಧ್ಯೇಯ ವಾಕ್ಯದೊಂದಿಗೆ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ನಾಲ್ಕು ಮುಖ್ಯ ಸ್ತರದ ಜನತೆಯನ್ನು ಅಂದರೆ ಬಡವರು, ಮಹಿಳೆಯರು, ಯುವ ಜನಾಂಗ ಮತ್ತು ಅನ್ನದಾತರನ್ನು ಗುರಿಯಾಗಿರಿಸಿ ಹಣ ಮೀಸಲಿಟ್ಟು, ಉತ್ತಮ ಯೋಜನೆಯೊಂದಿಗೆ ಬಜೆಟ್ ಮಂಡಿಸಲಾಗಿದೆ. ಡಿಜಿಟಲ್ ಕ್ರಾಂತಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ಅಭಿವೃದ್ಧಿ, ವಿಮಾನ ನಿಲ್ದಾಣ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಬಜೆಟ್ ನ ಒಟ್ಟು ಗಾತ್ರ ರೂ.47.66 ಲಕ್ಷ ಕೋಟಿಯಾಗಿದ್ದು ಒಟ್ಟಾರೆಯಾಗಿ ಅತ್ಯುತ್ತಮ ಪ್ರಗತಿಪರ ಬಜೆಟ್ ಇದಾಗಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.