ಕುಂದಾಪುರ : ರಾಜಕೀಯದಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡು ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಲ್ಲದೆ, ಪ್ರತಿ ಚುನಾವಣೆಯಲ್ಲಿ ಸದಾ ಚಟುವಟಿಕೆಯಿಂದ ಕಾರ್ಯೋನ್ಮುಕರಾಗುವುದರ ಜೊತೆಗೆ ಹಲವು ಸಾಮಾಜಿಕ ಹೋರಾಟಗಳನ್ನು ನಡೆಸಿ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಎಂಬ ಸಂಸ್ಥೆಗೆ ಸ್ಥಾಪಕ ಅಧ್ಯಕ್ಷನಾಗಿ ಕುಂದಾಪುರದಲ್ಲಿ ಇನಿದನಿ ಎಂಬ ಸಂಗೀತ ರಸ ಸಂಜೆ ಕಾರ್ಯಕ್ರಮ ಹಾಗೂ ಹುಲಿವೇಶ ಕುಣಿತ ಮುಂತಾದ ಕರಾವಳಿಯ ಸಾಂಸ್ಕ್ರತಿಕ ಕಲೆಗಳನ್ನು ಪೋಷಿಸಿಕೊಂಡು ಬರುತ್ತಿರುವ ಕಿಶೋರ್ ಕುಮಾರ್ ಒಬ್ಬ ಬಹುಮುಖ ಪ್ರತಿಭೆ
ಅವರ ಸಾಂಸ್ಕ್ರತಿಕ ಸಾಮಾಜಿಕ ಹೋರಾಟ ಮತ್ತು ರಾಜಕಿಯದ ಹೋರಾಟದ ನೆಲೆಯಲ್ಲಿ ಅವರನ್ನು ಭಾರತೀಯ ಜನತಾ ಪಕ್ಷವು ಉಡುಪಿ ಜಿಲ್ಲಾ ಅಧ್ಯಕ್ಚನಾಗಿ ನೇಮಿಸಿರುವುದು ಅವರ ನೈಜ ಹೋರಾಟಕ್ಕೆ ಸಂದ ಫಲ ಅವರ ರಾಜಕೀಯದ ಹಿನ್ನೋಟ ಇಲ್ಲಿದೆ
ದಿ.ಭಾಸ್ಕರ್ ರಾವ್ ಹಾಗೂ ದಿ.ಭವಾನಿ ಯಾನೆ ಇಂದಿರಾ ಭಾಸ್ಕರ್ ರಾವ್ ರವರ ಪುತ್ರನಾದ ಬಿ ಕಿಶೋರ ಕುಮಾರ್ 29-09-1972 ರಲ್ಲಿ ಜನಿಸಿ ಪ್ರಾರ್ಥಮಿಕ ಶಿಕ್ಷಣವನ್ನು ಕುಂದಾಪುರ ನಗರದ ಗರ್ಲ್ಸ್ ಶಾಲೆ ಹಾಗೂ ಪ್ರೌಢ ಶಿಕ್ಷಣ ಹಾಗೂ ದ್ವೀತಿಯ ಪಿ.ಯು.ಸಿ ಯನ್ನು ಬೋರ್ಡ್ ಹೈಸ್ಕೂಲ್ ನಲ್ಲಿ ಮುಗಿಸಿ ನಂತರ ಪೂರ್ವಜರು ನಡೆಸಿಕೊಂಡು ಬಂದ ಖ್ಯಾತ ನಶ್ಯವೆಂದು ಪ್ರಸಿದ್ದಿ ಪಡೆದ “ನಾಗಣ್ಣ ನಶ್ಯ” ವ್ಯವಹಾರದ ಜವಬ್ದಾರಿ
ರೋಟರ್ಯಾಕ್ಟ್ ಸಂಸ್ಥೆ ಹಾಗೂ ರೋಟರಿ ಸಂಸ್ಥಗೆ ಸೇರ್ಪಡೆಗೊಂಡು ಎರಡೂ ಸಂಸ್ಥೆಗಳಲ್ಲಿ ಅಧ್ಯಕ್ಷನಾಗಿ ಸೇವಾಕಾರ್ಯ 1996 ರಲ್ಲಿ ನಡೆದ ಪುರಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪ್ರವೇಶ 2000 ನೇ ಇಸವಿಯಲ್ಲಿ ಕುಂದಾಪುರ ನಗರ ಯುವ ಮೋರ್ಚ ಅಧ್ಯಕ್ಷನಾಗಿ ಆಯ್ಕೆ 2003ರ ಪುರಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಯಿಂದ ೧ನೇ ವಾರ್ಡಿನ ಅಭ್ಯರ್ಥಿಯಾಗಿ ಸ್ಪರ್ಧೆ 2003 ರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ.ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ. 2005 ರಲ್ಲಿ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯಲ್ಲಿ ನಡೆದ ಚುನಾವಣೆಗೆ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿದ ವಿಜಯಶಾಲಿ
2007 ರಲ್ಲಿ ಕುಂದಾಪುರ ಕ್ಷೇತ್ರ ಬಿ.ಜೆ.ಪಿ. ಯ ಅಧ್ಯಕ್ಷನಾಗಿ ಆಯ್ಕೆ. ಈ ಅಧಿಕಾರ ಅವಧಿಯಲ್ಲಿ ಪಕ್ಷದ ಸಂಘಟನೆಗೆ ಸಮಯವನ್ನು ನೀಡಿ ಶ್ರಮ ವಹಿಸಿದ ಫಲವಾಗಿ 2010 ರಲ್ಲಿ ಪುನಃ 2ನೇ ಬಾರಿ ಅಧ್ಯಕ್ಷನಾಗಿ ಆಯ್ಕೆ.
2011ನೇ ಇಸವಿಯಲ್ಲಿ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆ, ಅಲ್ಲದೇ ಈ ಸಂದರ್ಭದಲ್ಲಿ ಬಿ.ಜೆ.ಪಿ ಯು ಅಧಿಕ ಸ್ಥಾನಗಳನ್ನು ಗೆದ್ದುದರಿಂದ ಸಮಿತಿಗೆ 20 ತಿಂಗಳ ಅವಧಿಗೆ ಅಧ್ಯಕ್ಷನಾಗಿ ಭೃಷ್ಟಾಚಾರ ರಹಿತ ಆಡಳಿತವನ್ನು ನೀಡಿರುವುದಲ್ಲದೇ ಸಂಸ್ಥೆಯ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವ ಪ್ರಯತ್ನವನ್ನು ಮಾಡಿ ಯಶಸ್ಸನ್ನು ಕಂಡದ್ದು ಇವರ ಗಮನಾರ್ಹ ಸಾಧನೆ
2013 ರ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿಯ ಅಭ್ಯರ್ಥಿಯಾಗಿ ಸ್ಪರ್ಧೆ, ನಂತರ ಕರ್ನಾಟಕದ ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಟದ ಸಂಚಾಲಕನಾಗಿ ಆಯ್ಕೆ.2016 ರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ ಆಯ್ಕೆ. 2020 ರಲ್ಲಿ ಪುನಃ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದಾರೆ ಇದೀಗ 2024ರಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಂದಾಪುರದ ಹೆಮ್ಮೆ
ಕುಂದಾಪುರದ ಏ ಜಿ ಕೊಡ್ಗಿಯವರು ಈ ಹಿಂದೆ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಥಮ ವ್ಯಕ್ತಿಯಾಗಿದ್ದರು ಇದೀಗ ಕುಂದಾಪುರದ ಕಿಶೋರ್ ಕುಮಾರ್ ರವರು ಎರಡನೇ ವ್ಯಕ್ತಿಯಾಗಿದ್ದಾರೆ
ತನ್ನ ಸಾಮಜಿಕ ಕಳಕಳಿ ಕೆಲಸದಲ್ಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆ ಕಾರ್ಯಕ್ರಮದ ಸಂಯೋಜನೆಯಲ್ಲಿ ನಿಪುಣತೆ ಮತ್ತು ಸಂಘಟನಾ ಚತುರತೆ ಹಾಗೂ ಸರಳ ಸ್ವಭಾವದ ಸ್ನೇಹಜೀವಿಯಾಗಿರುವುದು ಅವರ ಹಿರಿಮೆಗೆ ಸಾಕ್ಷಿಯಾಗಿದೆ
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕುಂದಾಪುರದ ಕಿಶೋರ್ ಕುಮಾರ್ ರವರಿಗೆ ಅವರ ಅಭಿಮಾನಿ ವೃಂದದವರು ಶುಭ ಹಾರೈಸಿದ್ದು ಅವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲೆಂದು ಹರಸಿದ್ದಾರೆ ಇಂದು ಅವರಿಗೆ ಕುಂದಾಪುರ ಕ್ಷೇತ್ರ ಸಮಿತಿಯಿಂದ ಅಭಿನಂದನ ಕಾರ್ಯಕ್ರಮ ಬಿಜೆಪಿ ಕಾರ್ಯಲಯದಲ್ಲಿ ಜರುಗಲಿದೆ
ಕೆ.ಗಣೇಶ್ ಹೆಗ್ಡೆ ಕುಂದಾಪುರ