Home » ನಾನು ಸತ್ತಿಲ್ಲ ಬದುಕಿದ್ದೇನೆ
 

ನಾನು ಸತ್ತಿಲ್ಲ ಬದುಕಿದ್ದೇನೆ

ಪೂನಮ್‌

by Kundapur Xpress
Spread the love

ಮುಂಬೈ: ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ನಟಿ, ಮಾಡೆಲ್ ಪೂನಂ ಪಾಂಡೆ ಅವರು ದಿಢೀರನೇ ಸತ್ತಿಲ್ಲ. ಜೀವಂತವಾಗಿದ್ದೇನೆಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ನಟಿಯ ಸಾವಿನ ಸುದ್ದಿ ಸಂಪೂರ್ಣ ಸುಳ್ಳು ಎಂಬುದು ಗೊತ್ತಾಗಿದೆ.

ಅಲ್ಲದೇ ಗರ್ಭಕಂಠದ ಕ್ಯಾನ್ಸರ್ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇಕೆಂದೇ ತಾನು ಸಾವನ್ನಪ್ಪಿರುವ ರೀತಿ ಸುದ್ದಿ ಹಬ್ಬಿಸಿದೆವು ಎಂದು ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ, ಹೀಗೆ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಆದರೆ ಪೂನಂ ನಡೆ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಸಾವಿನ ನೆಪ ಹೇಳಿ ಪುಕ್ಕಟೆ ಪ್ರಚಾರ ಪಡೆಯುವುದು ಸರಿಯಲ್ಲ ಎಂದು ಜನ ಕಿಡಿಕಾರಿದ್ದಾರೆ

   

Related Articles

error: Content is protected !!