ಪಣಜಿ: ಅಯೋಧ್ಯೆ ರಾಮಮಂದಿರದದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ನಿರ್ಣಯವನ್ನು ಗೋವಾ ಮತ್ತು ಗುಜರಾತ್ ವಿಧಾನಸಭೆಗಳು ಸೋಮವಾರ ಅಂಗೀಕರಿಸಿತು
ಗೋವಾ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ರಮೇಶ್ ತಾವಾಡಕರ್ ಅಭಿನಂದನಾ ನಿರ್ಣಯ ಮಂಡಿಸಿದರು. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾ ವಿಗ್ರಹ ಪ್ರತಿಷ್ಟಾಪಿಸಿದ್ದಕ್ಕಾಗಿ ಈ ಸದನ ಮೋದಿ ಅವರನ್ನು ಅಭಿನಂದಿಸುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖೀಸಲಾಗಿದೆ. ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಸುವರ್ಣ ಯುಗ ಆರಂಭವಾಗಿದೆ ಎಂದು ಅಭಿನಂದನಾ ನಿರ್ಣಯದಲ್ಲಿ ತಿಳಿಸಲಾಗಿದ್ದು, ಸದನದಲ್ಲಿ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಗುಜರಾತ್ ನಲ್ಲಿಯೂ ರಾಜ್ಯ ಸರ್ಕಾರ ಆಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠೆ ಯಶಸ್ವಿಯಾಗಿ ನೆರವೇರಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವ ನಿರ್ಣಯವನ್ನು ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಸರ್ವಾನುಮತದಿಂದಅಂಗೀಕರಿಸಿತು