Home » ಪುರಂದರದಾಸರ ಆರಾಧನಾ ಮಹೋತ್ಸವ
 

ಪುರಂದರದಾಸರ ಆರಾಧನಾ ಮಹೋತ್ಸವ

by Kundapur Xpress
Spread the love

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಇಂದು ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಮಧ್ವಮಂಟಪದಲ್ಲಿ ಕಾತ್ಯಾಯಿನಿ ವಿಪ್ರ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಅಪರಾಹ್ನ 3.00 ಕ್ಕೆ ರಾಜಾಂಗಣದಲ್ಲಿ ಮಣಿಪಾಲ ಸುಗುಣಶ್ರೀ ಭಜನ ಮಂಡಳಿಯಿಂದ ಶ್ರೀ ಪುರಂದರ ಶತಕಂಠ ಗಾಯನ, ಸಂಜೆ 4.30ಕ್ಕೆ ರಥಬೀದಿ ಯಲ್ಲಿ ಪುರಂದರದಾಸರ ಶೋಭಾಯಾತ್ರೆ  5.30 ಕ್ಕೆ ರಾಜಾಂಗಣದಲ್ಲಿ  ವೆಂಕ ನರಸಿಂಹಾಚಾ‌ರ್ ಜೋಷಿ ಹುಬ್ಬಳ್ಳಿ ಅವರಿಂದ ಪುರಂದರೋಪನಿಷತ್ವಿಶೇಷ ಪ್ರವಚನ ನೆರವೇರಲಿದೆ.

ಸಂಜೆ 6.30 ಗಂಟೆಗೆ ನಡೆಯುವ ಪುರಂದರದಾಸರ ಸ್ಪರ್ಧೆಯಲ್ಲಿ ಕೀರ್ತನೆಗಳ ವಿಜೇತರಾದವರಿಗೆ ಬಹುಮಾನ ವಿತರಣೆ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀ ಪಾದರು ಅನುಗ್ರಹ ಸಂದೇಶ ನೀಡುವರು. 7.00 ಕ್ಕೆ ಹಿಂದೂಸ್ತಾನಿ ಗಾಯಕ ಪ್ರದೀಪ್ ಸಪ್ತಸ್ವರ ಕುಕ್ಕುಡೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಜರಗಲಿದೆ ಎಂದು ಶ್ರೀ ಪುತ್ತಿಗೆ ಮಠದ ಪ್ರಕಟನೆ ತಿಳಿಸಿದೆ

   

Related Articles

error: Content is protected !!