ಕುಂದಾಪುರ : ಕುಂದಾಪುರ ನಗರದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಸಂಕೀರ್ಣದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್ ರೀಚ್ ಸರ್ವಿಸ್ ಸೆಂಟರ್ ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು ಉದ್ಘಾಟಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ವಹಿಸಿದ್ದರು ಜನರ ಶ್ರವಣ ದೋಷ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಸೇವಾ ಕೇಂದ್ರ ಕುಂದಾಪುರ ಜನತೆಗೆ ಅನುಕೂಲವಾಗಲಿದ್ದು ಇದರ ಸದುಪಯೋಗ ಜನರು ಪಡೆದುಕೊಳ್ಳುವಂತಾಗಬೇಕು ಎಂದ ಅವರು ತನ್ನ ಪತ್ನಿ ವಿಜಯಾಬಾಯಿಯವರ ಹೆಸರಿನಲ್ಲಿ ಕಟ್ಟಡವನ್ನು ನಿರ್ಮಿಸಿಕೊಟ್ಟ ಶಿವರಾಮ್ ಪುತ್ರನ್ ಹಾಗೂ ಅವರ ಕುಟುಂಬದವರ ಕಾರ್ಯವನ್ನು ಶ್ಲಾಘಿಸಿದರು