ಅಯೋಧ್ಯೆ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುಟುಂಬ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕುಟುಂಬ ಸದಸ್ಯರೊಂದಿಗೆ ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಂದು ನಾನು ರಾಮಲಲಾನ ದರ್ಶನ ಪಡೆಯುವ ಭಾಗ್ಯ ಪಡೆದಿದ್ದೇನೆ. ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನಾನು ಅಪಾರ ಶಾಂತಿಯನ್ನು ಅನುಭವಿಸಿದೆ.ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಪ್ ನಾಯಕರು, ಅವರ ಕುಟುಂಬ ಸದಸ್ಯರು ರಾಮ ಮಂದಿರದಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ಕಳೆದಿದ್ದಾರೆ. ಅಯೋಧ್ಯೆಯಲ್ಲಿ ಸುಂದರವಾದ ಮತ್ತು ಭವ್ಯವಾದ ಮಂದಿರವನ್ನು ನಿರ್ಮಿಸಲಾಗಿದ್ದು, ಪ್ರತಿದಿನ ಲಕ್ಷಾಂತರ ರಾಮ ಭಕ್ತರು ಪೂಜೆ ಸಲ್ಲಿಸಲು ಬರುತ್ತಿರುವುದು ಇಡೀ ಜಗತ್ತಿಗೆ ಅದೃಷ್ಟದ ವಿಷಯವಾಗಿದೆ ಎಂದು ಕೇಜ್ರವಾಲ್ ಹೇಳಿದ್ದಾರೆ