ಬೆಂಗಳೂರು: ಈ ಬಜೆಟ್ನಲ್ಲಿ ಸರ್ಕಾರ ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್ ಮತ್ತು ಬಿಯರ್ಗಳ ಮೇಲಿನ ಸುಂಕ ಪರಿಷ್ಕರಿಸಲು ಉದ್ದೇಶಿಸಿದೆ. ಕಳೆದ ಸಾಲಿನಲ್ಲಿ ಅಬಕಾರಿಯಿಂದ ಬರೋಬ್ಬರಿ 28,181 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. 2024-25ನೇ ಸಾಲಿನಲ್ಲಿ 38,525 ಕೋಟಿ ರೂ.ಗಳ ಸಂಪನ್ಮೂಲ ಪಡೆಯುವ ಗುರಿ ಹೊಂದಲಾಗಿದೆ ಎನ್ನಲಾಗಿದೆ