ಉಡುಪಿ: ದೇಶ ವಿದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಾ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರ ಕಾರ್ಯಯೋಜನೆ ಅಭಿನಂದನೀಯ ಎಂದು ಅಂತಾರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳವಾರ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದರು.
ಆಹಾರಗಳ ನಿಯಮ,ಅನುಷ್ಠಾನಗಳ ಆಚರಣೆಗಳಿಂದ ಯತಿಧರ್ಮದ ಆಚರಣೆಯನ್ನು ನಡೆಸುತ್ತಾ ಶ್ರೀಕೃಷ್ಣ ಮಂದಿರಗಳನ್ನುಪ್ರತಿಷ್ಠಾಪಿಸಿದ್ದಾರೆ. ಅವರ ಪರ್ಯಾಯವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಹಾಗೂ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ ಎಂದು ಹಾರೈಸಿದರು.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದ ಆಮಂತ್ರಣದಂತೆ ಶ್ರೀಕೃಷ್ಣಮಠಕ್ಕೆ ಆಗಮಿಸಿದ ಶ್ರೀ ರವಿಶಂಕರ ಗುರೂಜಿ ಅವರನ್ನು ಪರ್ಯಾಯ ಮಠಾಧೀಶ ಶ್ರೀಸುಗುಣೇಂದ್ರತೀರ್ಥರು, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥರು ಬರಮಾಡಿಕೊಂಡರು. ಶ್ರೀಮಠದ ವಿದ್ವಾಂಸರು, ಅಧಿಕಾರಿಗಳು ಪೂರ್ಣ ಕುಂಭ ಸ್ವಾಗತವನ್ನು ನೀಡಿದರು. ದೇವರ ದರುಶನವನ್ನು ಮಾಡಿಸಿ, ದೇವರ ಪ್ರಸಾದವನ್ನು ನೀಡಿ ಸನ್ಮಾನಿಸಲಾಯಿತು. ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು