Home » ಅಪರಾಧ ಸುದ್ದಿಗಳು
 

ಅಪರಾಧ ಸುದ್ದಿಗಳು

by Kundapur Xpress
Spread the love
ಮೀನುಗಾರ ನಾಪತ್ತೆ

ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಕೋಡಿಕನ್ಯಾನ ಗ್ರಾಮದ ನಿವಾಸಿ ಮೀನುಗಾರ ರಾಜು (52) ಕಾಣೆಯಾಗಿದ್ದಾರೆ. ಫೆ.12 ರಂದು ಹೆಂಡತಿ ಮನೆಯಾದ ಕೋಡಿ ಕನ್ಯಾನಕ್ಕೆ ಇವರು ಬಂದಿದ್ದು, ಫೆ.18ರಂದು ಬೆಳಗ್ಗೆ ಕೇರಳದ ಚೇರ್ವತ್ತೂರು ಮಡಕಾರ್‌ಗೆ ಕೆಲಸದ ಬಗ್ಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಪುತ್ರ ಸಾಗರ್ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನೀರಿನ ಟ್ಯಾಂಕರ್‌ಗೆ ಮಿನಿ ಗೂಡ್ಸ್ ಡಿಕ್ಕಿ

ಬೈಂದೂರು  ಉಪ್ಪುಂದ ಪೇಟೆ ಸಮೀಪದ ಓವರ್ ಬ್ರಿಡ್ಜ್‌ನಲ್ಲಿ ಟ್ಯಾಂಕ‌ರ್ ಗಿಡಗಳಿಗೆ ನೀರುಣಿಸುತ್ತಾ ಹೋಗುತ್ತಿರುವ ವೇಳೆ ಶಿರೂರಿನಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್‌ ವಾಹನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು ಗೂಡ್ಸ್‌ ವಾಹನ ಚಾಲಕ ಅಬ್ದುಲ್ ರಶೀದ್, ಟ್ಯಾಂಕರ್‌ನಿಂದ ನೀರುಣಿಸುತ್ತಿದ್ದ ಕಾರ್ಮಿಕ ವಿಜಯ್ ಗಾಯಗೊಂಡಿದ್ದಾರೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಆಟೋ ಅಡ್ಡಗಟ್ಟಿ ಅಪರಿಚಿತರಿಂದ ಬೆದರಿಕೆ

ಕುಂದಾಪುರ: ಆಲೂರು ಗ್ರಾಮದ ತಾರಿಬೇರು ಎಂಬಲ್ಲಿ ಅಪರಿಚಿತರು ಆಟೋರಿಕ್ಷಾ ಅಡ್ಡಗಟ್ಟಿ ಬೆದರಿಸಿದ ಬಗ್ಗೆ ದೂರು ದಾಖಲಾಗಿದೆ. ಚಿತ್ತೂರಿನ ಆಟೋ ಚಾಲಕ ಸುದೀಪ್ ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಫೆ.18ರಂದು ಸಂಜೆ 7 .00 ಗಂಟೆಗೆ ನಾಡಾ ಗ್ರಾಮದ ದೇವಸ್ಥಾನಕ್ಕೆ ಹೋಗಿದ್ದು, ಅಲ್ಲಿಯ ದೇವರ ದರ್ಶನ ಮುಗಿಸಿ ವಾಪಾಸ್ ಅವರನ್ನು ಮನೆಗೆ ಬಿಡಲು ಆಲೂರು ಮಾರ್ಗವಾಗಿ ತಾರಿಬೇರು ಸಮೀಪ ರಸ್ತೆಯಲ್ಲಿ ಬರುತ್ತಿರುವಾಗ ರಾತ್ರಿ 11.15 ಗಂಟೆಗೆ ಯಾರೊ ಇಬ್ಬರು ಅಪರಿಚಿತರು ಕೈಯಲ್ಲಿ ರಾಡ್ ಹಿಡಿದುಕೊಂಡು ಆಟೋವನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿದ್ದು, ಅವಾಚ್ಯಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Related Articles

error: Content is protected !!