ಕುಂದಾಪುರ: ಬೈಂದೂರಿನ ಶಿರೂರಿನಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ವಾಹನ ತಡೆದು ದರೋಡೆಗೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಬೈಂದೂರು ತನಿಖೆ ವಿಭಾಗದ ಪಿಎಸ್ಐ ಮಹೇಶ್ ಮತ್ತು ಸಿಬ್ಬಂದಿ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ
ಭಟ್ಕಳದಿಂದ ಬೈಂದೂರು ಕಡೆಗೆ ಬರುತ್ತಿದ್ದ ವಾಹನಗಳನ್ನು ಹೆದ್ದಾರಿಯಲ್ಲಿ ತಡೆದು ದರೋಡೆಗೆ ಯತ್ನಿಸುತ್ತಿದ್ದ 7 ಜನರ ಚಲನವಲನ ಗಮನಿಸಿ ಪೊಲೀಸರು ಸುತ್ತುವರಿದಿದ್ದು ಈ ಸಂದರ್ಭ ಮಹಮ್ಮದ್ ದ್ಯಾನೀಶ್ ಮದನಿ, ಮಹಮ್ಮದ್ ಕೈಫ್ ಹಾಗೂ ಮಹಮ್ಮದ್ ಅನ್ನಾನ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಾರು ಯಾನೆ ಶಾರುಖ್, ಚಪ್ಪು ಯಾನೆ ಶಫಾನ್, ವಾಜೀದ್ ಮತ್ತು ನಿಶಾದ್ ಪರಾರಿಯಾಗಿದ್ದಾರೆ ಬಂಧಿತರಲ್ಲಿ ಓರ್ವ ಅಪ್ರಾಪ್ತ ವಯಸ್ಸಿನವನೆಂದು ತಿಳಿದುಬಂದಿದೆ
ಬಂಧಿತರಿಂದ ಸ್ಪೇನ್ಲೆಸ್ ಚೂರಿ, ಮೊಬೈಲ್, ಕಬ್ಬಿಣದ ರಾಡ್. ಮೆಣಸಿನ ಹುಡಿ ಪ್ಯಾಕೆಟ್, ಮರದ ದೊಣ್ಣೆ ಸ್ವಾಧಿನಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡವರಿಗೆ ಬಲೆ ಬೀಸಲಾಗಿದೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ