ಚಿಕ್ಕಮಗಳೂರು: ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅಡ್ಡಮತದಾನ ಮಾಡಿರುವುದು ದುರದೃಷ್ಟಕರ. ಇದೊಂದು ರೀತಿ ರಾಜಕಾರಣದ ವ್ಯಭಿಚಾರವೇ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಮಂಗಳವಾರ ಮಾಧ್ಯಮ ಪ್ರತಿನಿಗಳ ಜೊತೆ ಮಾತನಾಡಿದ ಅವರು, ಪಕ್ಷದಿಂದ ಗೆದ್ದು ಈಗ ಅಡ್ಡ ಮತದಾನ ಮಾಡಿರುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ವ್ಯಕ್ತಿಗತ ಸಂಬಂಧಗಳಿಗಾಗಿ ರಾಜೀ ರಾಜಕಾರಣ ಮಾಡಿದರೆ ಅದರಿಂದ ಉಳಿದವರ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ನಮ್ಮ ಪಕ್ಷ ಗೆಲ್ಲುತ್ತದೆ. ಅದರಲ್ಲಿ ಸಂಶಯವಿಲ್ಲ. ಆದರೆ ಇಂತಹ ಅಶಿಸ್ತನ್ನು ನಾವು ಎಷ್ಟು ಕಾಲ ಸಹಿಸಿಕೊಳ್ಳಬೇಕು. ಯಾವುದೇ ಪಕ್ಷದಲ್ಲಾಗಲಿ ಅವಕಾಶವಾದಿಗಳನ್ನು ಬೆಂಬಲಿಸುವುದು ಸಹ ಒಂದು ರೀತಿ ಅನೈತಿಕ ರಾಜಕಾರಣಕ್ಕೆ ನಾವೇ ವೇದಿಕೆ ಸೃಷ್ಟಿ ಮಾಡಿದಂತಾಗುತ್ತದೆ ಎಂದರು.