ಉಡುಪಿ : ಕಾಂಗ್ರೆಸ್ಸಿನ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚಾರಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಿಂದ ನಡೆದ ದೇಶ ವಿರೋಧಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಖಂಡಿಸಿ, ಉಡುಪಿ ಜಿಲ್ಲಾ ಬಿಜೆಪಿ ಮತ್ತು ಬಿಜೆಪಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಉಡುಪಿಯ ಬ್ರಹ್ಮಗಿರಿ ಸರ್ಕಲ್ ಬಳಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.
ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಬಿಜೆಪಿ ದ.ಕ. ಸಹ ಪ್ರಭಾರಿ ರಾಜೇಶ್ ಕಾವೇರಿ ಮತ್ತು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಮಾತನಾಡಿ ಕಾಂಗ್ರೆಸ್ ಪಕ್ಷದ ಪಾಕ್ ಮೇಲಿನ ಪ್ರೀತಿ ಮತ್ತು ದೇಶ ವಿರೋಧಿ ನೀತಿಯನ್ನು ಖಂಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತನ್ನೂ ಲೆಕ್ಕಿಸದೆ ಬ್ಯಾರಿಗೇಡ್ ಗಳನ್ನು ತಳ್ಳಿ ಜಿಲ್ಲಾ ಕಾಂಗ್ರೆಸ್ ಕಛೇರಿಯತ್ತ ನುಗ್ಗಲು ಯತ್ನಿಸಿದ ಶಾಸಕರು, ಯುವ ಮೋರ್ಚಾ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರನ್ನು ಪೋಲಿಸರು ವಶಕ್ಕೆ ಪಡೆದರು
ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮುಖಂಡರುಗಳಾದ ಶ್ರೀಶ ನಾಯಕ್ ಪೆರಣಂಕಿಲ, ದಿನಕರ ಬಾಬು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಜಯರಾಮ್ ಸಾಲ್ಯಾನ್, ಶಿವಕುಮಾರ್ ಅಂಬಲಪಾಡಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ವೀಣಾ ಎಸ್. ಶೆಟ್ಟಿ, ಶ್ರೀನಿಧಿ ಹೆಗ್ಡೆ, ವಿಜಯ ಕುಮಾರ್ ಉದ್ಯಾವರ, ರಾಘವೇಂದ್ರ ಉಪ್ಪುರು, ಶ್ರೀಕಾಂತ್ ನಾಯಕ್, ಸತೀಶ್ ಪೂಜಾರಿ, ದಿಲ್ಲೇಶ್ ಶೆಟ್ಟಿ, ಅನಿತಾ ಶ್ರೀಧರ್, ಯುವ ಮೋರ್ಚಾ ಪದಾಧಿಕಾರಿಗಳಾದ ಅಕ್ಷಿತ್ ಶೆಟ್ಟಿ ಹೆರ್ಗ, ಅಭಿರಾಜ್ ಸುವರ್ಣ, ಅವಿನಾಶ್ ಉಳ್ತುರ್, ಸುಹಾಸ್ ಶೆಟ್ಟಿ, ಸಚಿನ್ ಪಿತ್ರೋಡಿ, ಸಂದೇಶ್ ಪ್ರಭು, ಬಿಜೆಪಿ ಮಂಡಲ ಅಧ್ಯಕ್ಷರುಗಳಾದ ದಿನೇಶ್ ಅಮೀನ್, ಜಿತೇoದ್ರ ಶೆಟ್ಟಿ, ನವೀನ್ ನಾಯಕ್, ರಾಜೀವ ಕುಲಾಲ್, ಸುರೇಶ್ ಶೆಟ್ಟಿ ಗೋಪಾಡಿ, ದೀಪಕ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಹೇಂದ್ರ ಕುಮಾರ್ ನೀಲಾವರ, ಗೋಪಾಲ್ ಕಾಂಚನ್, ಮಂಜುನಾಥ್ ಮಣಿಪಾಲ್, ಗೋಪಾಲಕೃಷ್ಣ ರಾವ್, ರಶ್ಮಿತಾ ಬಿ. ಶೆಟ್ಟಿ, ಪೂರ್ಣಿಮಾ ರತ್ನಾಕರ್, ಅಶ್ವಿನಿ ಶೆಟ್ಟಿ, ಸುಜಾಲಾ ಸತೀಶ್ ಸಹಿತ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ನಗರಸಭಾ ಸದಸ್ಯರು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು