ಸೌಕೂರು : ‘ಪುಷ್ಪ ಪವಾಡ’ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವ ಮಾ. 1ರಂದು ಆರಂಭಗೊಂಡಿದ್ದು ಮಾ. 5 ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಮಾ. 1ರಂದು ಬೆಳಗ್ಗೆ ಧ್ವಜಾರೋಹಣ, ರಾತ್ರಿ ಯಾಗ ಶಾಲಾ ಪ್ರವೇಶ, ಭೇರಿತಾಡನ, ಕೌತುಕ ಬಂಧನ, ಪನ್ನಗೋತ್ಸವ ನಡೆಯಿತು ಇಂದು ಅಗ್ನಿ ಜನನಾದಿ ಕರ್ಮಗಳು, ಮಯೂರ ವಾಹನೋತ್ಸವ, ಮಾ. 3ರಂದು ಗಜ ವಾಹನೋತ್ಸವ, ಮಾ. 4ರಂದು ಅಶ್ವವಾಹನೋತ್ಸವ ನೆರವೇರಲಿದೆ. ಮಾ. 5ರಂದು ಶ್ರೀ ಮನ್ಮಹಾರಥೋತ್ಸವ, ರಾತ್ರಿ ಸಿಂಹ ವಾಹನೋತ್ಸವ, ಸೌಕೂರಿನ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಿಂದ ಸೇವೆ ಆಟ, ಮಾ. 6ರಂದು ಚೂರ್ಣೋತ್ಸವ ಸೇವೆ ಆಟ, ಮಾ. 7ರಂದು ಅವಭ್ರಥ, ಧ್ವಜಾವರೋಹಣಾದಿಗಳು ನಡೆಯಲಿವೆ ಎಂದು ಶ್ರೀ ಸೌಕೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ