ಉಡುಪಿ: ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ಪ್ರಕಟಣೆ ಹೊರಡಿಸಿದ್ದಾರೆ. ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಶಾಂಕ್ ಶಿವತ್ತಾಯ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆಯಾಗಿ ಸಂಧ್ಯಾ ರಮೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ನಳಿನಿ ಪ್ರದೀಪ್, ಅನಿತಾ ಮರವಂತೆ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ವಿಜಯ್ ಕೊಡವೂರು, ಪ್ರಧಾನ ಕಾರ್ಯದರ್ಶಿಗಳಾಗಿ ಶಂಕರ್ ಅಂಕದಕಟ್ಟೆ ಸುರೇಂದ್ರ ಕುಮಾರ್ ವರಂಗ, ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ, ಎಸ್. ನಾರಾಯಣ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕುಮಾರ್ ದಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಸುಭಾಷ್ ನಾಯ್ಕ ಶ್ರೀಧರ್ ಗೌಡ, ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರುಡಾಲ್ಫ್, ಪ್ರಧಾನ ಕಾರ್ಯದರ್ಶಿಗಳಾಗಿ ಜುನೈದ್, ಜೈಸನ್ ಎಂ.ಡಿ., ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕಮಲಾಕ್ಷ ಹೆಬ್ಬಾರ್, ಪ್ರ. ಕಾರ್ಯದರ್ಶಿಯಾಗಿ ಪುಷ್ಪ ರಾಜ್ ಶೆಟ್ಟಿ ಶ್ರೀಕಾಂತ್ ಕಾಮತ್ರನ್ನು ನೇಮಿಸಿದ್ದಾರೆ.