ಬೆಂಗಳೂರು : ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಘಟನೆ ಸಂಬಂಧ ಎರಡು-ಮೂರು ದಿನಗಳಲ್ಲಿ ದುಷ್ಕರ್ಮಿಯನ್ನು ಪತ್ತೆ ಮಾಡುತ್ತೇವೆ. ಈಗಾಗಲೇ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ರಾಮೇಶ್ವರಂ ಕೆಫೆಗೆ ಭೇಟಿ ಹಾಗೂ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ ಸಿಸಿಟಿವಿಯಲ್ಲಿ ಒಬ್ಬ ಅಪರಿಚಿತ ನನ್ನು ಪತ್ತೆ ಮಾಡಲಾಗಿದೆ. ಆತ ಟೋಪಿ, ಮಾಸ್ಕ್ ಹಾಕಿಕೊಂಡು ಬಸ್‌ನಲ್ಲಿ ಬಂದಿದ್ದಾನೆ. ಬ್ಯಾಗ್‌ನಲ್ಲಿ ಟೈಮ್ ಬಾಂಬ್ ತಂದು ಹೋಟೆಲ್‌ನಲ್ಲಿ ಇರಿಸಿದ್ದಾನೆ. ಅವನು ಬಂದು ಹೋದ ನಂತರ ಸ್ಪೋಟ ‘ಸಂಭವಿಸಿದೆ. ಆತ ಹೋಟೆಲ್‌ನಲ್ಲಿ ತಿಂಡಿ ತಿಂದಿದ್ದಾನೆ. ಅದೆಲ್ಲವೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎರಡು- ಮೂರು ದಿನದಲ್ಲಿ ದುಷ್ಕರ್ಮಿಯನ್ನು ಪತ್ತೆ ಮಾಡಲಾಗುವುದು ಎಂದರು.
ಸದ್ಯ ಎಲ್ಲ ಗಾಯಾಳುಗಳು ಆರೋಗ್ಯ ವಾಗಿದ್ದು, ಎರಡು-ಮೂರು ದಿನಗಳಲ್ಲಿ ಡಿಸ್ಟಾರ್ಜ್ ಆಗಲಿದ್ದಾರೆ. ಗಾಯಾಳುಗಳ ಚಿಕಿತ್ಸಾವೆಚ್ಚವನ್ನು ಸರ್ಕಾರವೇ ಭರಿಸಲಿದೆವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು, ಬೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ | ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಲಾಗಿದೆ.
ಎಲ್ಲ ಗಾಯಾಳುಗಳು ಚೆನ್ನಾಗಿ ಮಾತನಾಡಿದರು. ಈಗಾಗಲೇ ಇಬ್ಬರನ್ನು ಡಿಸ್ಟಾರ್ಜ್ ಮಾಡಲಾಗಿದೆ. -ಸ್ಫೋಟ ಸಂಭವಿಸಿದಾಗ ಅಲ್ಲಿಯೇ ಇದ್ದ ಸ್ವರ್ಣಾಂಬ ಎಂಬುವವರಿಗೆ ಹೆಚ್ಚುಗಾಯ ವಾಗಿದೆ ಎಂದು ಅವರು ತಿಳಿಸಿದರು.
ಕೆಫೆಗೆ ಭೇಟಿ ಪರಿಶೀಲನೆ:
ಇದಕ್ಕೂ ಮುನ್ನ ಬಾಂಬ್ ಸ್ಪೋಟಗೊಂಡ ‘ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಹಾನಿ ಯನ್ನು ಸಿದ್ದರಾಮಯ್ಯ ವೀಕ್ಷಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು ಘಟನೆ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.