Home » ಉದಯ್‌ ಕುಮಾರ ಶೆಟ್ಟಿ ಹೆಸರು ಮುನ್ನೆಲೆಗೆ
 

ಉದಯ್‌ ಕುಮಾರ ಶೆಟ್ಟಿ ಹೆಸರು ಮುನ್ನೆಲೆಗೆ

ಲೋಕಸಭಾ ಕ್ಷೇತ್ರ

by Kundapur Xpress
Spread the love

ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಬಾಲ್ಯ ಸ್ವಯಂಸೇವಕ ಹಾಗೂ ನಿಷ್ಠಾವಂತ ಕಾರ್ಯಕರ್ತ ಪ್ರಸ್ತುತ ಮಂಗಳೂರು ವಿಭಾಗದ ಪ್ರಭಾರಿಯಾಗಿರುವ ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿಯವರ ಹೆಸರು ನಿನ್ನೆಯಿಂದ ಮುನ್ನಲೆಗೆ ಬಂದಿದೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಸಂಸದರಾಗಿರುವ ಶೋಭಾ ಕರಂದ್ಲಾಜೆಯವರ ಬಗ್ಗೆ ಅಪಸ್ವರದ ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದು ನಿನ್ನೆ ಮಲ್ಪೆಯಲ್ಲಿ ಕರಂದ್ಲಾಜೆಯವರ ಬಗ್ಗೆ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು ವರದಿಯಾಗಿದೆ

ಈ ಹಿನ್ನಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿನ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯು ಕರ್ನಾಟಕ ಬಿಜೆಪಿ ಉಪಾಧ್ಯಕ್ಷರಾದ ರಾಜೇಂದ್ರ ಹಾಗೂ ಮಾಜಿ ಶಾಸಕ ರಾಜೀವ್‌ ಕುಡುಚಿಯವರ ಉಪಸ್ಥಿತಿಯಲ್ಲಿ  ಶೃಂಗೇರಿಯಲ್ಲಿ ನಡೆದಿದ್ದು ಅಲ್ಲಿ ಬಹುತೇಕ ಪದಾಧಿಕಾರಿಗಳ ಒಲವು ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿಯವರ ಬಗ್ಗೆ ವ್ಯಕ್ತಪಾಗಿದ್ದು ಅವರಿಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದ ಘಟನೆಯು ನಡೆಯಿತು

ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿ – ಪರಿಚಯ

ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿಯವರು ಬಾಲ್ಯ ಸ್ವಯಂಸೇವಕರಾಗಿದ್ದು 1989 ರಲ್ಲಿ ಭಾರತೀಯ ಜನತಾ ಪಕ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ 1992ರಲ್ಲಿ ಉಡುಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷರಾಗಿ ನಿಯುಕ್ತಿ 1998ರಲ್ಲಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಜವಬ್ದಾರಿಯುತ ಹೊಣೆಯನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು ಮುಂದೆ ರಾಷ್ಟ್ರೀಯ ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ

ಮಾನ್ಯ ಯಡಿಯೂರಪ್ಪನವರು ರಾಜ್ಯಾಧ್ಯಕ್ಷನಾದ ಸಂದರ್ಭದಲ್ಲಿ ಉಡುಪಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಿಭಾಗದ ಪ್ರಭಾರಿಯಾಗಿ ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿಯವರು ನೇಮಕವಾಗಿದ್ದು ನಳಿನ್‌ ಕುಮಾರ್‌ ಕಟೀಲ್ ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಇವರನ್ನೇ ಪ್ರಭಾರಿಯಾಗಿ ಮುಂದುವರೆಸಲಾಗಿದ್ದು ಇದೀಗ ನೂತನ ಅಧ್ಯಕ್ಷರಾದ ಬಿ ವೈ ವಿಜಯೇಂದ್ರರವರು ಇವರನ್ನೇ ಮಂಗಳೂರು ವಿಭಾಗದ ಪ್ರಭಾರಿಯಾಗಿ ಮುಂದುವರಿಸಿದ್ದಾರೆ

ಕಳೆದ ಅನೇಕ ವರ್ಷಗಳಿಂದ ಪಕ್ಷದ ನಾನಾ ಜವಬ್ದಾರಿಗಳನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಪೂರೈಸಿ ಕಾರ್ಯಕರ್ತರ ಒಡನಾಟದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುವ ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿಯವರು ಮುಂದಿನ ದಿನಗಳಲ್ಲಿ ಸಂಸದರಾಗಿ ಆಯ್ಕೆಯಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಇನ್ನಷ್ಟು ಅಭಿವೃದ್ದಿಯ ವೇಗ ಪಡೆಯುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ನಾಯಕರು ಇವರಿಗೆ ಅವಕಾಶ ಮಾಡಿಕೊಡಬೇಕೆಂಬುವುದೇ ಕಾರ್ಯಕರ್ತರ  ಹೃದಯಾಂತರಾಳದ ಬೇಡಿಕೆ   

 

   

   

Related Articles

error: Content is protected !!