ಶಿರ್ವ : ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಜಸ್ಟೀಸ್ ಕೆ.ಎಸ್. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ, ಶಿರ್ವ, ಬಂಟರ ಸಂಘ (ರಿ) ಶಿರ್ವ, ವಿಶ್ವಬ್ರಾಹ್ಮಣ ಯುವ ಸಂಗಮ (ರಿ), ಶಿರ್ವ ಮತ್ತು ಲಯನ್ಸ್ ಕ್ಲಬ್, ಶಿರ್ವ-ಮಂಚಕಲ್ ಇವರ ಜಂಟಿ ಆಶ್ರಯದಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ, ವಿದ್ಯಾವರ್ಧಕ ಕ್ಯಾಂಪಸ್, ಶಿರ್ವ ಇಲ್ಲಿ ಹಮ್ಮಿಕೊಳ್ಳಲಾದ “ಉಚಿತ ಆರೋಗ್ಯ ತಪಾಸಣಾ ಶಿಬಿರ”ವನ್ನು ಶಾಸಕರು, ವಿಧ್ಯಾವರ್ಧಕ ಸಂಘ (ರಿ) ಶಿರ್ವ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಉಪಾಧ್ಯಕ್ಷರಾದ ಪ್ರೊ. (ಡಾl) ಸತೀಶ್ ಕುಮಾರ್ ಭಂಡಾರಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ರಾಜೇಶ್, ನಿಟ್ಟೆ ಕ್ಯಾಂಪಸ್ ಎನ್.ಎಂ.ಎ.ಎಂ.ಐ.ಟಿ ರಿಜಿಸ್ಟ್ರಾರ್ ಯೋಗೀಶ್ ಹೆಗ್ಡೆ, ಶಿರ್ವ ವಿದ್ಯಾವರ್ಧಕ ಸಂಘ (ರಿ.) ಪ್ರಧಾನ ಕಾರ್ಯದರ್ಶಿಗಳಾದ ವಿ. ಸುಬ್ರಯ್ಯ ಹೆಗ್ಡೆ, ವಿಧ್ಯಾವರ್ಧಕ ಸಂಘ (ರಿ.) ಶಿರ್ವ ಆಡಳಿತಾಧಿಕಾರಿ ವೈ. ಭಾಸ್ಕರ್ ಶೆಟ್ಟಿ, ಶಿರ್ವ ಮಹಿಳಾ ಮಂಡಲ (ರಿ.) ಗೌರವಾಧ್ಯಕ್ಷರಾದ ಬಬಿತಾ ಅರಸ, ಬಂಟರ ಸಂಘ (ರಿ) ಶಿರ್ವ ಅಧ್ಯಕ್ಷರಾದ ವೀರೇಂದ್ರ ಶೆಟ್ಟಿ ಪಂಜಿಮಾರು, ವಿಶ್ವಬ್ರಾಹ್ಮಣ ಯುವ ಸಂಗಮ (ರಿ) ಶಿರ್ವ ಅಧ್ಯಕ್ಷರಾದ ಉಮೇಶ್ ಆಚಾರ್ಯ, ಲಯನ್ಸ್ ಕ್ಲಬ್ ಶಿರ್ವ-ಮಂಚಕಲ್ ಅಧ್ಯಕ್ಷರಾದ ಫೆಲಿಕ್ಸ್ ಡಿ’ಸೋಜಾ, ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಸಜ್ಞಾ ಎಮ್ ಶೆಟ್ಟಿ, ಕ್ಷೇಮ ಗ್ರಾಮೀಣ ಆರೋಗ್ಯ ಕೇಂದ್ರಗಳ ಸಂಯೋಜಕರಾದ ಮೇಜರ್ (ಡಾl) ರಾಘವೇಂದ್ರ ಹುಚ್ಚಣ್ಣವರ ಉಪಸ್ಥಿತರಿದ್ದರು