ಕುಂದಾಪುರ : ಸುಮಾರು ಎಂಟು ತಿಂಗಳ ಹಿಂದೆ ಚಿನ್ನದ ರಖಂ ವ್ಯಾಪಾರಿಯು ಕುಂದಾಪುರ ನಗರದ ಹರಿ ಪ್ರಸಾದ್ ಲಾಡ್ಜಿನಲ್ಲಿ ತಂಗಿದ್ದ ವೇಳೆ ಅವರಲ್ಲಿದ್ದ 421.38 ಮಿಲಿ ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಕುಂದಾಪುರ ಪೊಲೀಸರು ಭೇದಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮುಂಬಯಿಯಲ್ಲಿ ಬಂಧಿಸಿ ಅವರಿಂದ 10 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ರಾಜಸ್ಥಾನ ಮೂಲದ ರಾಮ್ ರಾಯ್ (21) ಹಾಗೂ ಪ್ರವೀಣ್ ಕುಮಾರ್ (25) ಬಂಧಿತರು.
ಪ್ರಕರಣ ಸಂಬಂಧಿಸಿದಂತೆ ಕಳೆದ ಎಂಟು ತಿಂಗಳಿನಿಂದ ಕಳ್ಳರನ್ನು ಪತ್ತೆಹಚ್ಚಲು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ನಿರ್ದೇ ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಯು.ಬಿ.ನಂದಕುಮಾರ್ ಮಾರ್ಗದರ್ಶನದಲ್ಲಿ ಎಸ್ ಐ ಗಳಾದ ವಿನಯ ಎಂ.ಕೊರ್ಲಹಳ್ಳಿ ಮತ್ತು ಪ್ರಸಾದ ಕುಮಾರ್ ಕೆ ಹಾಗೂ ಸಿಬಂದಿ ವರ್ಗದ ಸಂತೋಷ ಕುಮಾರ್, ಶ್ರೀಧರ್, ರಾಮ ಪೂಜಾರಿಯವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ