ಎಲ್ಲರ ಚಿತ್ತ ಮೈಲಾರೇಶ್ವರನತ್ತ
ಕುಂದಾಪುರ : ಶ್ರೀ ಮೈಲಾರೇಶ್ವರ ದೇವರ ಅಷ್ಠಬಂಧ ಹಾಗೂ ಬ್ರಹ್ಮಕಲಶೋತ್ಸವ ಪ್ರಯಕ್ತ ನಡೆಯವ ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನದಂದು ಧಾರ್ಮಿಕ ವಿಧಿ ವಿಧಾನಗಳು ವಿದ್ವಾನ್ ಕೋಟ ಚಂದ್ರಶೇಖರ್ ಸೋಮಯಾಜಿಯವರಿಂದ ನಡೆಯಿತು.
ಬ್ರಹ್ಮಕಲಶೋತ್ಸವ ನಿಮಿತ್ತ ಇಂದು ಮತ್ತು ನಾಳೆ ಪುನ್ರರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದ್ದು ಜನಸಾಗರವೇ ಹರಿದು ಬರುವ ನಿರೀಕ್ಷೆ ಇದ್ದು ಈಗಾಗಲೆ ಪರ ಊರಿನಲ್ಲಿರುವ ಮೈಲಾರೇಶ್ವರನ ಭಕ್ತಾಭಿಮಾನಿಗಳು ಆಗಮಿಸಿ ಸೇವೆಯ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ
ಇಂದು ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ನಾಳೆ ನಡೆಯುವ ಮಹಾ ಅನ್ನಸಂತರ್ಪಣೆಯಲ್ಲಿ 15 ಸಾವಿರ ಜನ ಭಕ್ತರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ .
ಚಿಕ್ಕನ್ ಸಾಲ್ ರಸ್ತೆಯು ನವ ವಧುವಿನಂತೆ ಶೃಂಗಾರಗೊಂಡು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಇದೀಗ ಎಲ್ಲರ ಚಿತ್ತ ಚಿಕ್ಕನ್ಸಾಲ್ ರೋಡ್ ನತ್ತ ನೆಟ್ಟಿದ್ದು ಇಂದು ಸಂಜೆ 7.00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಭಾವ ಯೋಗ ಗಾನ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ